ಜೇಸಿಐ ಪಂಜ ಪಂಚಶ್ರೀ ಪ್ರಾಂತ್ಯ ‘ಎಫ್’ ವಲಯ 15 ಆಶ್ರಯದಲ್ಲಿ ಪ್ರೇರಣ ಘಟಕದ ಸದಸ್ಯರುಗಳಿಗೆ ಪುನಃ ಶ್ಚೇತನ ಕಾರ್ಯಗಾರ ಮತ್ತು ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮ ಜ.23 ರಂದು ಪಂಜ ಲಯನ್ಸ್ ಕ್ಲಬ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು HGF ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ವಾಚಣ್ಣ ಕೆರೆಮೂಲೆ ವಹಿಸಿಕೊಂಡರು. ಉದ್ಘಾಟನೆ ಮತ್ತು ಪುರಸ್ಕಾರ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕಿ ಶ್ರೀಮತಿ ಗಿರಿಜಾ ಕೆದಿಲ JFM ದೇವಿಪ್ರಸಾದ್ ಜಾಕೆ ಸ್ದಾಪಕಾಧ್ಯಕ್ಷರು ಜೇಸಿ ಐ ಪಂಜ ಪಂಚಶ್ರೀ,ತರಬೇತುದಾರರಾಗಿ ಜೇಸಿಐ ಎಸ್ .ಜಿ.ರಾಷ್ಟ್ರೀಯ ತರಬೇತುದಾರ ವೇಣುಗೋಪಾಲ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಜೇಸಿ ಅಶ್ವತ್ ಬಾಬ್ಲುಬೆಟ್ಟು ಕಾರ್ಯಕ್ರಮ ನಿರ್ದೇಶಕರಾದ ಜೇಸಿ ಕಿರಣ್ ಕಂರ್ಬು ನೆಕ್ಕಿಲ ಮತ್ತು ಅಶೋಕ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹೊನ್ನಪ್ಪ ಗೌಡ ಬೊಳ್ಳಾಜೆ ಅಡಿಕೆ ತೆಂಗು ಮರ ಹತ್ತುವವರು ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕರಿಸಲಾಯಿತು.ನಂತರ ಘಟಕದ ಸದಸ್ಯರುಗಳಿಗೆ ತರಬೇತಿ ಕಾರ್ಯಗಾರ ನಡೆಯಿತು.
ಕಾರ್ಯಕ್ರಮದಲ್ಲಿ ವೇದಿಕೆಗೆ ಜೇಸಿ ಚರಣ್ ದೇರಪ್ಪಜ್ಜನಮನೆ ಆಹ್ವಾನಿಸಿದರು. ಜೇಸಿ ವಾಣಿಯನ್ನು ಜೇಸಿ ಪುನೀತ್ ಮೂಲೆಮನೆ ವಾಚಿಸಿದರು. ಅತಿಥಿಗಳ ಪರಿಚಯವನ್ನು ಜೇಸಿ ಕಾರ್ತಿಕ್ ಐ ವಿ , ಜೇಸಿ ಪ್ರವೀಣ್ ಕುಂಜತ್ತಾಡಿ ಮತ್ತು ಜೇಸಿ ಅಶೋಕ್ ಕುಮಾರ್ ದಿಡುಪೆ ನೆರವೇರಿಸಿದರು. ಕಾರ್ಯದರ್ಶಿ ಜೇಸಿ ಅಶ್ವತ್ ಬಾಬ್ಲುಬೆಟ್ಟು ವಂದಿಸಿದರು.ಕಾರ್ಯಕ್ರಮದಲ್ಲಿ ಜೇಸಿಐ ಪಂಜ ಪಂಚಶ್ರೀಯ ಪೂರ್ವಾಧ್ಯಕ್ಷರು ಮತ್ತು ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.