ಜ.25 : ಶ್ರೀ ಅಯ್ಯಪ್ಪ ದೇವಸ್ಥಾನ ಗುಂಡಿಹಿತ್ಲು, ಪ್ರತಿಷ್ಠಾ ವಾರ್ಷಿಕೋತ್ಸವ

0

ಹರಿಹರ ಪಳ್ಳತಡ್ಕದ ಶ್ರೀ ಅಯ್ಯಪ್ಪ ದೇವಸ್ಥಾನ ಗುಂಡಿಹಿತ್ಲು, ಇದರ ಪ್ರತಿಷ್ಠಾ ವಾರ್ಷಿಕೋತ್ಸವ ಜ.25 ರಂದು ನಡೆಯಲಿದೆ.

ಅಂದು ಬೆಳಗ್ಗೆ 6 ರಿಂದ ಸಂಜೆ 6 ತನಕ ಅರ್ಧ ಏಕಾಹ ಭಜನೆ ನಡೆಯಲಿದ್ದು ವಿವಿಧ ಭಜನಾ ತಂಡಗಳು ಭಾಗವಹಿಸಲಿವೆ. ಬೆಳಗ್ಗೆ ಗಣಪತಿ ಹವನ ನಡೆಯಲಿದೆ ಬಳಿಕ ನಾಗ ತಂಬಿಲ ನಡೆಯಲಿದೆ. ಬಳಿಕ ದೇವರ ಹಾಗೂ ದೈವಗಳ ಪ್ರತಿಷ್ಠಾ ವಾರ್ಷಿಕ ಪೂಜೆ ನಡೆದು ಮಧ್ಯಾಹ್ನ ಮಹಾ ಪೂಜೆ ನಡೆದು ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಪರಿವಾರ ದೈವಗಳ ತಂಬಿಲ ನಡೆಯಲಿದೆ ಭಕ್ತಾದಿಗಳು ಭಾಗವಹಿಸುವಂತೆ ಕೋರಲಾಗಿದೆ.