ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ರಾಜ್ಯ ಸಮಿತಿಯು ರಾಜ್ಯಾದ್ಯಂತವಿರುವ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಅಧೀನದ ಮದ್ರಸಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಮುಅಲ್ಲಿಮರ ಸಾಹಿತ್ಯ ಅಭಿರುಚಿಗಳ ಅನಾವರಣ ಹಾಗೂ ಪ್ರೋತ್ಸಾಹಕ್ಕಾಗಿ “ಅರಳಿದ ಸಾಹಿತ್ಯ ಬೆಳಗಿದ ಸಮಾಜ” ಎಂಬ ಧ್ಯೇಯದೊಂದಿಗೆ ಮುಅಲ್ಲಿಂ ಮೆಹರ್ ಜಾನ್ – 2023 ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಪ್ರಯುಕ್ತ ರೇಂಜ್,ಝೋನ್,ಜಿಲ್ಲಾ ಮಟ್ಟದ ಸ್ಪರ್ಧೆಗಳು ಮುಕ್ತಾಯಗೊಂಡು ಅದರ ರಾಜ್ಯ ಮಟ್ಟದ ಸ್ಪರ್ಧೆಯು ಕಾವಲ್ ಕಟ್ಟೆಯ ಅಲ್ ಖಾದಿಸ ವಿದ್ಯಾ ಸಂಸ್ಥೆಯಲ್ಲಿ ರಾಜ್ಯ ಸಮಿತಿ ವತಿಯಿಂದ ಆಕರ್ಷಣೀಯವಾಗಿ ನಡೆಯಿತು.ಸ್ಪರ್ಧೆಯಲ್ಲಿ ಭಾಗವಹಿಸಿದ ಸುಳ್ಯ ರೆಂಜ್ ಗೊಳಪ್ಪಟ್ಟ ಮದ್ರಸ ಅಧ್ಯಾಪಕರು ವಿವಿಧ ವಿಷಯಗಳಲ್ಲಿ ಉತ್ತಮ ಪ್ರದರ್ಶನಗೈದು ಮೆಚ್ಚುಗೆಗಳಿಸಿದರು.ಅಬ್ದುಲ್ ಕರೀಂ ಸಖಾಫಿ ಮೊಗರ್ಪಣೆ,ಜುನೈದ್ ಹಿಮಮಿ ಜಾಲ್ಸೂರು,ಇರ್ಫಾನ್ ಸಅದಿ ಗಾಂಧಿನಗರ,ಸೈಯ್ಯಿದ್ ಹುಸೈನ್ ಪಾಷಾ ತಂಙಳ್ ಅನ್ಸಾರಿಯಾ ,ಹಂಝತ್ತುಲ್ ಕರ್ರಾರ್ ಮುಈನಿ ಅನ್ಸಾರಿಯ್ಯಾ ರಾಜ್ಯಕ್ಕೆ ಪ್ರಥಮರಾದರೆ ಇಸ್ಮಾಯೀಲ್ ಝೈನಿ ಪೆರಾಜೆ,ಮುಹಮ್ಮದ್ ಅಲೀ ಸಖಾಫಿ ಗೂನಡ್ಕ,ಅಬ್ದುರ್ರಹ್ಮಾನ್ ಸಅದಿ ಗಾಂಧಿನಗರ,ಅಬ್ದಲ್ ಲತೀಫ್ ಸಖಾಫಿ ಗಾಂಧಿನಗರ,ಅಬ್ದುಲ್ಲ ಹಿಮಮಿ ಅನ್ಸಾರಿಯ್ಯಾ ದ್ವಿತೀಯ ಸ್ಥಾನ ಗಳಿಸಿ, ಮುಹಮ್ಮದ್ ಹನೀಫ್ ಸಖಾಫಿ ಗಾಂಧಿನಗರ ತೃತೀಯ ಸ್ಥಾನ ಪಡೆದರು.