ಹಿಂದೂ ಯುವಕರ ಮೇಲೆ ಗಡಿಪಾರು ನೋಟೀಸು ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳದಿಂದ ಸುಳ್ಯದಲ್ಲಿ ಪ್ರತಿಭಟನೆ

0

ಗಡಿಪಾರು ನೋಟೀಸು ಹಿಂಪಡೆಯಲು ಶರಣ್ ಪಂಪ್ ವೆಲ್ ಆಗ್ರಹ

ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ನೀಡಿರುವ ಗಡಿಪಾರು ನೋಟೀಸ್ ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಪ್ರತಿಭಟನಾ ಸಭೆ ಸುಳ್ಯ ತಾಲೂಕು ಕಚೇರಿ ಎದುರು ನಡೆಯಿತು. ‌ಸಭೆಯಲ್ಲಿ ಭಾಗವಹಿಸಿ‌ ಮಾತನಾಡಿದ ಸಂಘಟನೆಯ ನಾಯಕರು ಹಿಂದೂ ಕಾರ್ಯಕರ್ತರ ಮೇಲೆ ಹೊರಡಿಸಿರುವ ಗಡಿಪಾರು ನೋಟೀಸು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ವಿಶ್ವ ಹಿಂದು ಪರಿಷದ್ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ “ಈ ದೇಶದ ಸಂಸ್ಕೃತಿ, ಸಂಪ್ರದಾಯ ಪರಂಪರೆ ರಕ್ಷಣೆ ಮಾಡುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಿದ್ದಾರೆ. ಅಂತವರ ಮೇಲೆ ಗಡಿಪಾರು ಆದೇಶ ಖಂಡನೀಯ. ಹಿಂದೂಗಳು ಪೂಜೆ ಮಾಡುವ ಗೋವುಗಳನ್ನು ಸಾಗಾಟ ಮಾಡುವಾಗ ಅದನ್ನು ತಡೆದು ರಕ್ಷಣೆ ಮಾಡುವುದು ತಪ್ಪೇ, ಹಿಂದು ಹೆಣ್ಣು ಮಕ್ಕಳಿಗೆ ತೊಂದರೆಯಾದಾಗ ರಕ್ಷಣೆ ಮಾಡೋದು ತಪ್ಪೇ? ಎಂದು ಪ್ರಶ್ನಿಸಿದ ಅವರು, ನಮ್ಮ ಕಾರ್ಯಕರ್ತರಿಗೆ ಗಡಿಪಾರು ನೋಟೀಸು ಯಾಕೆ ಎಂದು ಕೇಳಿದರು.

ಈಗಿನ ಸರಕಾರದ ಬಂದ ಬಳಿಕ ನಮ್ಮ ಕಾರ್ಯಕರ್ತರ ಮೇಲೆ ವಿನಾ ಕಾರಣ ಈ ರೀತಿಯ ನೋಟೀಸು ನೀಡಿದ್ದಾರೆ. ಇಲ್ಲಿ ಗೋ‌ಕಳ್ಳತನ, ಅಕ್ರಮ ಮರಳುದಂದೆ, ಜೂಜಾಟ ಇತ್ಯಾದಿಗಳು ನಡೆಯುತಿದೆ ಇದೆಲ್ಲವೂ ಈ ಸರಕಾರಕ್ಕೆ, ಪೋಲೀಸ್ ಇಲಾಖೆಯ ‌ಕಣ್ಣಿಗೆ ಕಾಣೋದಿಲ್ಲವೇ? ಮೊದಲು ದೇಶದ್ರೋಹದ ಕೆಲಸದಲ್ಲಿ ತೊಡಗಿರುವವರ ಮೇಲೆ ಕ್ರಮಕೈಗೊಳ್ಳಬೇಕೆ ಹೊರತು ಸಮಾಜದ ಒಳಿತಿಗಾಗಿ ಕೆಲಸ ಮಾಡುವ ನಮ್ಮ ಕಾರ್ಯಕರ್ತರ ಮೇಲಲ್ಲ. ತಕ್ಷಣ ಗಡಿಪಾರು ‌ನೋಟೀಸು ಹಿಂಪಡೆಯಬೇಕು ಎಂದು ಅವರು‌ ಹೇಳಿದರು.

ನಗರ ಪಂಚಾಯತ್ ಮಾಜಿ ಅಧ್ಯಕ್ಷ ‌ವಿನಯ ಕುಮಾರ್ ಕಂದಡ್ಕ ಮಾತನಾಡಿ, ಹಿಂದು ಯುವಕರ ಮೇಲೆ ಗಡಿಪಾರು ನೋಟೀಸ್ ಮಾಡುವ ಮೂಲಕ ಹಿಂದುತ್ವದ ಶಕ್ತಿ ಕುಂದಿಸಬಹುದೆಂದು ಬಾವಿಸಿದರೆ ಅದು ಎಂದಿಗೂ ಸಾಧ್ಯವಿಲ್ಲ. ಸಮಾಜದ ಒಳಿತಿಗಾಗಿ ಕೆಲಸ ಮಾಡುವ ನಮ್ಮ ಕಾರ್ಯಕರ್ತರ ಮೇಲೆ ಗಡಿಪಾರು ಅಸ್ತ್ರವನ್ನು ತಕ್ಷಣ ಹಿಂಪಡೆಯಬೇಕು ಎಂದು‌ ಹೇಳಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಮಾತನಾಡಿ,ಕಾರ್ಯಕರ್ತರ ಮೇಲಿನ ಗಡಿಪಾರು ನೋಟಿಸು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ವಿ.ಹಿಂ.ಪ. ತಾಲೂಕು‌ ಸಂಚಾಲಕ ಸೋಮಶೇಖರ ಪೈಕ,
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ತಾ.ಪಂ. ಮಾಜಿ ಅಧ್ಯಕ್ಷರುಗಳಾದ ಚನಿಯ ಕಲ್ತಡ್ಕ, ಗುಣವತಿ ಕೊಲ್ಲಂತಡ್ಕ, ಮಾಜಿ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಲತೀಶ್ ಗುಂಡ್ಯ, ಮಹೇಶ್ ರೈ ಮೇನಾಲ, ಪ್ರಕಾಶ್ ಅರಂತೋಡು, ಭಾನುಪ್ರಕಾಶ್ ಪೆರುಮುಂಡ, ನಿಕೇಶ್ ಉಬರಡ್ಕ, ಚಂದ್ರಶೇಖರ ಕೇರ್ಪಳ, ನವೀನ್ ಎಲಿಮಲೆ, ವರ್ಷಿತ್ ಚೊಕ್ಕಾಡಿ, ಸುದರ್ಶನ ಪಾತಿಕಲ್ಲು, ವಿಘ್ನೇಶ್, ಅರವಿಂದ ಸುಳ್ಯ, ಶೀಲಾ ಕುರುಂಜಿ, ಬುದ್ಧ ಜಿ ನಾಯ್ಕ್, ಹರಿಪ್ರಸಾದ್ ಗುಂಡ್ಯ, ಕೇಶವ ಹೊಸಗದ್ದೆ, ಬೂಡು ರಾಧಾಕೃಷ್ಣ ರೈ, ಶಶಿಕಲಾ ನೀರಬಿದಿರೆ, ಜಿನ್ನಪ್ಪ ಪೂಜಾರಿ, ಕೌಶಲ್, ರೂಪೇಶ್ ಅರಂತೋಡು, ಪ್ರಣೀತ್ ಕಣಕ್ಕೂರು, ಪ್ರಭೋದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಹರಿಪ್ರಸಾದ್ ಎಲಿಮಲೆ ಕಾರ್ಯಕ್ರಮ ನಿರೂಪಿಸಿದರು.