ಸುಳ್ಯ ಪೇಟೆಯಲ್ಲಿ ಪೈಪ್ ಒಡೆದು ಪೋಲಾಗುತ್ತಿರುವ ನೀರು

0

ಸುಳ್ಯ ನಗರದ ಸರಕಾರಿ ಆಸ್ಪತ್ರೆ ಸಮೀಪದ ರಸ್ತೆಯಲ್ಲಿ ನಗರ ಪಂಚಾಯತ್ ಕುಡಿಯುವ ನೀರಿನ ಪೈಪ್ ಒಡೆದು ನೀರು ರಸ್ತೆಯಲ್ಲಿ ಹರಿಯುತ್ತಿದೆ.


ಮೈನ್ ಲೈನ್ ಪೈಪ್ ಒಡೆದಿದ್ದು ಅಪಾರ ಪ್ರಮಾಣದ ನೀರು ರಸ್ತೆಯಲ್ಲಿ ಹರಿದು ಚರಂಡಿಗೆ ಸೇರುತ್ತಿದೆ.
ನಗರ ಪಂಚಾಯತ್ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.