ರಾಜ್ಯ ಮಟ್ಟದ ದೇಶ ಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಶಾಲೆ ಪ್ರಥಮ

0

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಇವರು ಎಸ್.ಆರ್.ಎಸ್ ಸಮೂಹ ಸಂಸ್ಥೆಗಳು ಪಿಳ್ಳೆಕಾರನಹಳ್ಳಿ ಚಿತ್ರದುರ್ಗ ಇಲ್ಲಿ ನಡೆಸಿದ “ರಾಜ್ಯ ಮಟ್ಟದ ದೇಶ ಭಕ್ತಿ ಗೀತಗಾಯನ ಸ್ಪರ್ಧೆ”ಯಲ್ಲಿ ಸೈಂಟ್ ಜೋಸೆಫ್ ಆಂಗ್ಲ ಮಾದ್ಯಮ ಶಾಲಾ ಸ್ಕೌಟ್ ವಿಭಾಗದ ವಿದ್ಯಾರ್ಥಿಗಳು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.

ಗುರುಪ್ರಸಾದ್ ರೈ ಮತ್ತು ಸುರೇಖಾ ರೈ ರವರ ಪುತ್ರ ಲಕ್ಷ್ಯಜಿತ್ ರೈ , ರಾಮಚಂದ್ರ ಮತ್ತು ಉಷಾಕುಮಾರಿ ರವರ ಪುತ್ರ ಅಶ್ವಿಜ್ ಅತ್ರೇಯ ಜಿ ಆರ್ , ವಿಕ್ರಮ ಮತ್ತು ರಂಜಿನಿರವರ ಪುತ್ರ ತನ್ಮಯ್ ಸೋಮಯಾಗಿ, ಶಾಮ್ ಪ್ರಸಾದ್ ಮತ್ತು ಜಯಶ್ರೀ ಯವರ ಪುತ್ರ ಚಂದನ್ ಎಂ ಎಸ್ , ಚಿದಾನಂದ ಮತ್ತು ಗಾಯತ್ರಿರವರ ಪುತ್ರ ಮೌರ್ಯ ಸಿ. ಬಿ. , ಪುಣ್ಯಮೂರ್ತಿ ಮತ್ತು ಶರಣ್ಯ ಆರ್ ರವರ ಪುತ್ರ ಹಾರ್ದಿಕ್ ಪಿ. , ಸದಾನಂದ ಮತ್ತು ಉಮಾವತಿರವರ ಪುತ್ರ ಬಿಪಿನ್ ಕುಮಾರ್ ಹಾಗೂ ಮನೋಜ್ ಕುಮಾರ್ ಮತ್ತು ಪೂಜಾರವರ ಪುತ್ರ ದಿವಿಜ್ ಯು ಎಂ ರವರು ಭಾಗವಹಿಸಿದ ವಿದ್ಯಾರ್ಥಿಗಳಾಗಿರುತ್ತಾರೆ. ಈ ಅಪ್ರತಿಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕರಾದ ವಂದನೀಯ ಫಾ ವಿಕ್ಟರ್ ಡಿಸೋಜ ರವರು , ಶಾಲಾ ಮುಖ್ಯೋಪಾದ್ಯಯಿನಿ ಸಿ. ಬಿನೋಮಾ ರವರು ಅದ್ದೂರಿಯಾಗಿ ಶಾಲಾ ವತಿಯಿಂದ ಅಭಿನಂದಿಸಲಾಯಿತು.ಈ ವಿದ್ಯಾರ್ಥಿಗಳಿಗೆ ಶಾಲಾ ಸ್ಕೌಟ್ ಶಿಕ್ಷಕ ಭಾನುಪ್ರಕಾಶ್ ಅರಂತೋಡು ತರಬೇತಿಯನ್ನು ನೀಡಿರುತ್ತಾರೆ. ಹಾಗೂ ಸಿ. ಮೇರಿ ಸ್ಟೆಲ್ಲಾರವರು ತಂಡದ ವ್ಯವಸ್ಥಾಪಕರಾಗಿ ಸಹಕರಿಸಿರುತ್ತಾರೆ.