ಪಂಜ: ದಿ.ಶ್ರೀಮತಿ ಲಿಂಗಮ್ಮ ಬೊಳ್ಳಾಜೆ ರವರಿಗೆ ಶ್ರದ್ಧಾಂಜಲಿ

0

ನ.5 ರಂದು ನಿಧನರಾದ ಐವತ್ತೊಕ್ಲು ಗ್ರಾಮದ ಬೊಳ್ಳಾಜೆ ಶೀನಪ್ಪ ಗೌಡರ ಪತ್ನಿ ಶ್ರೀಮತಿ ಲಿಂಗಮ್ಮ ರವರಿಗೆ ಶ್ರದ್ಧಾಂಜಲಿ ಸಭೆ ನುಡಿನಮನ ವೈಕುಂಠ ಸಮಾರಾಧನೆ ನ.22 ರಂದು ಅವರ ಸ್ವಗೃಹದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಗಣೇಶ್ ಅಡ್ಕ ನುಡಿನಮನ ಸಲ್ಲಿಸಿದರು. ಬಾಲಕೃಷ್ಣ ಬೊಳ್ಳಾಜೆ ಸ್ವಾಗತಿಸಿದರು ಮತ್ತು ವಂದಿಸಿದರು. ಮೃತರ ಪತಿ, ಪುತ್ರರಾದ ಬಾಲಕೃಷ್ಣ, ಸತೀಶ್, ವಸಂತ, ಪುತ್ರಿ ಶ್ರೀಮತಿ ವಿದ್ಯಾ ಗುಡ್ಡಪ್ಪ ಗೌಡ ಕಾಯರ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು,ಕುಟುಂಬಸ್ಥರು, ನೆಂಟರಿಷ್ಟರು, ಬಂಧುಗಳು ಉಪಸ್ಥಿತರಿದ್ದು ಮೃತರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.