ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಭಾಷಾ ಸೌಹರ್ದತಾ ದಿನ

0

ನೆಹರು ಮೆಮೋರಿಯಲ್ ಕಾಲೇಜು, ಸುಳ್ಯ ದಿನಾಂಕ.೨೧ರಂದು ಭಾಷಾ ಸೌಹಾರ್ದತಾ ದಿನವನ್ನು ವಿವಿಧ ಭಾಷಾ ವಿಭಾಗಗಳ ನೇತೃತ್ವದಲ್ಲಿ ಆಚರಿಸಲಾಯಿತು. ಕಾರ್‍ಯಕ್ರಮದ ಸಭಾ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರುದ್ರಕುಮಾರ್.ಎಂ.ಎಂ ಇವರು ವಹಿಸಿದ್ದರು. ನೆಹರು
ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಮಿಥಾಲಿ ರೈಇವರು ವಿಶೇಷ ಉಪನ್ಯಾಸವನ್ನು ನೀಡಿದರು.

ಕಾರ್‍ಯಕ್ರಮದಲ್ಲಿ ವಿಶೇಷವಾಗಿ ವಿವಿಧ ಭಾಷೆಗಳ ಹಾಡುಗಳನ್ನು ವಿದ್ಯಾರ್ಥಿಗಳು ಹಾಡುವ ಮೂಲಕ ಭಾಷಾಸೌಹಾರ್ದತೆಯನ್ನು ಮೆರೆದರು. ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮಮತ.ಹೆಚ್.ವಿ ಇವರು ಸ್ವಾಗತಿಸಿ, ಕಾರ್‍ಯಕ್ರಮವನ್ನು ನಿರೂಪಿಸಿದರು. ಆಂತರಿಕ ಗುಣಮಟ್ಟ ಖಾತರಿ ಕೋಶ ಸಂಯೋಜಕಿ ಡಾ.ಮಮತ.ಕೆ ವಂದಿಸಿದರು.

ಶ್ರೀಮತಿ ಭವ್ಯ.ಪಿ.ಎಮ್ ಇಂಗ್ಲೀಷ್ ವಿಭಾಗ ಮುಖ್ಯಸ್ಥರು ಕಾರ್‍ಯಕ್ರಮವನ್ನು ಸಂಘಟಿಸಿದರು. ಉಪನ್ಯಾಸಕ, ಉಪನ್ಯಾಸಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಕಾರ್‍ಯಕ್ರಮದಲ್ಲಿ ಭಾಗವಹಿಸಿದರು.