ಓಡಬಾಯಿ ಮುಖ್ಯ ರಸ್ತೆಯ ಬಳಿ ಕೊಳಚೆ ನೀರು

0


ಪರಿಸರದಲ್ಲಿ ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣ

ಸುಳ್ಯ ಮಾಣಿ ಮೈಸೂರು ಹೆದ್ದಾರಿ ಓಡಬಾಯಿ ಸಮೀಪ ರಸ್ತೆ ಬದಿಯ ಚರಂಡಿಯಲ್ಲಿ ಇಂದು ಸಂಜೆ ಸುಮಾರು ೪ ಗಂಟೆಗೆ ಏಕಾಏಕಿ ಕೊಳಚೆ ನೀರು ಬಂದು ಸ್ಥಳೀಯರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ತೋಡಿನಂತೆ ಹರಿದು ಬರುವ ಕೊಳಚೆ ನೀರು ಮುಖ್ಯ ರಸ್ತೆಯಲ್ಲಿರುವ ಚರಂಡಿಯ ಮುಖೇನ ಸುಳ್ಯದ ಜೀವನದಿ ಪಯಸ್ವಿನಿಯ ಒಡಲು ಸೇರುತ್ತಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.