ರೀಕೊ ಸೊಸೈಟಿ ಅಧ್ಯಕ್ಷರಾಗಿ ಎಸ್.ಶಿವಕುಮಾರ್ ಕೂಟೇಲು, ಉಪಾಧ್ಯಕ್ಷರಾಗಿ ಉಮೇಶ್ ಜಿ. ಐವರ್ನಾಡು ಆಯ್ಕೆ

0


ರಿಪಾಟ್ರಿಯೇಟ್ ಎಂಪ್ಲಾಯೀಸ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ (ರೀಕೊ) ಸುಳ್ಯ ಇದರ ಆಡಳಿತ ಮಂಡಳಿಯ ಮೊದಲ ಸಭೆ ನ.19 ರಂದು ಮಧ್ಯಾಹ್ನ 3 ಗಂಟೆಗೆ ವಿಕಾಸ ಸೌಧ, ಪಂಚಾಯತ್ ಬಿಲ್ಡಿಂಗ್, ಐವರ್ನಾಡು ಇಲ್ಲಿ ಮಂಗಳೂರಿನ ಉದ್ಯಮಿ ರಾಮನ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ರೀಕೋ ಸೊಸೈಟಿಯ ನೋಂದಾವಣೆಯಾದ ಬಗ್ಗೆ ಬೈಲಾವನ್ನು ಎಲ್ಲರ ಸಮ್ಮುಖದಲ್ಲಿ ಮಂಡಿಸಲಾಯಿತು. ನಂತರ ರೀಕೊ ಸೊಸೈಟಿಗೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಶ್ರೀಮತಿ ಶಕುಂತಳಾ ಅವರನ್ನು ನೇಮಕ ಮಾಡಿ ನಿರ್ಣಯ ಕೈಗೊಳ್ಳಲಾಯಿತು.


ಬಳಿಕ ರೀಕೊ ಸೊಸೈಟಿಯ ಪ್ರಥಮ ಆಡಳಿತ ಮಂಡಳಿಯ ಚುನಾವಣೆ ನಡೆಯಿತು. ಫಲಿತಾಂಶವನ್ನು ಚುನಾವಣಾ ಅಧಿಕಾರಿಯವರ ಅನುಮೋದನೆಯ ಮೇರೆಗೆ ಸಭೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಮುಂದಿನ 5 ವರ್ಷದ ಅವಧಿಗೆ ರೀಕೊ ಸೊಸೈಟಿಯ ಅಧ್ಯಕ್ಷರಾಗಿ ಶಿವಕುಮಾರ್ ಎಸ್. ಕೂಟೇಲ್ ಮತ್ತು ಉಪಾಧ್ಯಕ್ಷರಾಗಿ ಉಮೇಶ್ ಜಿ ಐವರ್ನಾಡು ಇವರನ್ನು ಆಯ್ಕೆ ಮಾಡಲಾಯಿತು.
ಹಾಗೂ ಆಡಳಿತ ಮಂಡಳಿ ನಿರ್ದೇಶಕರುಗಳಾಗಿ ರಾಮನ್ ಕಲ್ಲಾಜೆ (ಉದ್ಯಮಿ ಮಂಗಳೂರು), ಸಂಧ್ಯಾಗು ಕೌಡಿಚಾರು, ಮೋಹನಪ್ಪ ಕಂದಡ್ಕ, ಸಿವಿಲ್ ಕಾಂಟ್ರಾಕ್ಟರ್, ಶಂಕರಲಿ0ಗ0 ಎಂ. ದರ್ಖಾಸ್ತು, ಪುನೀತ್ ಎಸ್.ಜಿ. ಹಳೇಗೇಟು, ನಟರಾಜ ಎಸ್. ಸಿ.ಕೂಪ್, ವರದರಾಜನ್ ನೆಟ್ಟಾರ್ (ಮಂಗಳೂರು), ಅಂತೋನಿರಾಜ್ ಎ,. ಸುಳ್ಯ, ಶಿವರಾಜ್ ಬೆತ್ತೋಡಿ, ಕೃಷ್ಣಮೂರ್ತಿ, 72 ಕಾಲನಿ, ಸಬಾಸ್ಟಿನ್, ಕಲ್ಲುಗುಂಡಿ, ರಾಮಕುಮಾರ್.ಎಂ ನಾಗಪಟ್ಟಣ, ಶ್ರೀಮತಿ ಪರಿಮಳ ಎನ್.ಎಂ. ಐವರ್ನಾಡು, ಶ್ರೀಮತಿ ಮುತ್ತುಕುಮಾರಿ ತೊಡಿಕಾನ ಇವರು ಆಯ್ಕೆಯಾದರು.