ಎನ್ನೆಂಸಿಯ ಆಂತರಿಕ ಗುಣಮಟ್ಟ ಖಾತರಿಕೋಶ ಮತ್ತು ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಪ್ರಯುಕ್ತ ನ.೨೪ ರಂದು ಅಲ್ಪಸಂಖ್ಯಾತರ ಅಭಿವೃಧ್ಧಿಗಾಗಿ ಸರಕಾರ ರೂಪಿಸಿರುವ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್‍ಯಕ್ರಮ ನಡೆಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂ.ಎಂ. ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಸುಳ್ಯ ಬಿ.ಸಿ.ಡಬ್ಯು.ಡಿ. ಹಾಸ್ಟೆಲ್ ಮೇಲ್ವಿಚಾರಕ ಮಹಮ್ಮದ್ ಸದ್ದಾಂ ಇವರು ಸರಕಾರದ ವಿವಿಧ ಸೌಲಭ್ಯಗಳ ಬಗ್ಗೆ ಮಾತನಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಮತಿ. ರತ್ನಾವತಿ ಡಿ. ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಮಮತ ಕೆ. ಕಾರ್‍ಯಕ್ರಮ ಆಯೋಜಿಸಿದರು. ಕೃಷ್ಣವೇಣಿ ಸ್ವಾಗತಿಸಿ, ಹರ್ಷಿತಾ ವಂದಿಸಿದರು. ಶ್ರೀಲಯ ಪ್ರಾರ್ಥಿಸಿ, ಪರ್ಝನಾ ಕಾರ್‍ಯಕ್ರಮ ನಿರೂಪಿಸಿದರು.