ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪತ್ರಕರ್ತರಿಗೆ ಕ್ರೀಡಾಕೂಟ

0

ನಿವೃತ್ತ ಕೃಷಿ ಅಧಿಕಾರಿ ಮೋಹನ ನಂಗಾರು ಅವರಿಂದ ಉದ್ಘಾಟನೆ

ಪತ್ರಕರ್ತರಿಗೆ ವಿವಿಧ ಸ್ಪರ್ಧೆ-ಬಹುಮಾನ ವಿತರಣೆ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಪತ್ರಕರ್ತರಿಗೆ ಕ್ರೀಡಾಕೂಟದ ಪ್ರಯುಕ್ತ ವಿವಿಧ ಕ್ರೀಡಾ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ಸಮಾರಂಭವು ಸುಳ್ಯದ ಪ್ರೆಸ್ ಕ್ಲಬ್ ವಠಾರದಲ್ಲಿ ನ.೩೦ರಂದು ಜರುಗಿತು.

ಕ್ರೀಡಾಕೂಟವನ್ನು ನಿವೃತ್ತ ಕೃಷಿ ಅಧಿಕಾರಿ ಮೋಹನ ನಂಗಾರು ಅವರು ಉದ್ಘಾಟಿಸಿ, ಶುಭಹಾರೈಸಿದರು.
ಕೆ.ಜೆ.ಯು. ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಈಶ್ವರ ವಾರಣಾಶಿ ಅವರು ಅಧ್ಯಕ್ಷತೆ ವಹಿಸಿದ್ದರು. ಕೆ.ಜೆ.ಯು. ದ.ಕ.ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ್ , ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕಲ್ನಾರ್, ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ, ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ, ಸುದ್ದಿ ಮಾಹಿತಿ ಮುಖ್ಯಸ್ಥ ಕೃಷ್ಣಬೆಟ್ಟ, ಪತ್ರಕರ್ತರುಗಳಾದ ಗಂಗಾಧರ ಕಲ್ಲಪಳ್ಳಿ, ಗಿರೀಶ್ ಅಡ್ಪಂಗಾಯ, ಕೆ.ಜೆ.ಯು. ಜಿಲ್ಲಾ ಉಪಾಧ್ಯಕ್ಷ ಶರೀಫ್ ಜಟ್ಟಿಪಳ್ಳ, ಕೆ.ಜೆ.ಯು. ಸುಳ್ಯ ತಾಲೂಕು ಘಟಕದ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಕಾರ್ಯದರ್ಶಿ ಶ್ರೀಮತಿ ಜಯಶ್ರೀ ಕೊಯಿಂಗೋಡಿ, ಕೋಶಾಧಿಕಾರಿ ವಿನಯ್ ಜಾಲ್ಸೂರು, ಕ್ರೀಡಾ ಕಾರ್ಯದರ್ಶಿ ಕೆ.ಟಿ. ಬಾಗೀಶ್ ಕೊಯಿಕುಳಿ, ಕರ್ನಾಟಕ ಬ್ಯಾಂಕ್ ಸುಳ್ಯ ಶಾಖಾ ವ್ಯವಸ್ಥಾಪಕ ವಿಠಲ ವಾಗ್ಲೆ, ಕರ್ನಾಟಕ ಬ್ಯಾಂಕ್ ಸಿಬ್ಬಂದಿ ಅರವಿಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿ, ಕೆ.ಜೆ.ಯು. ಸುಳ್ಯ ತಾಲೂಕು ಘಟಕದ ಮಾಜಿ ಕಾರ್ಯದರ್ಶಿ ಯಶ್ವಿತ್ ಕಾಳಮ್ಮನೆ ವಂದಿಸಿದರು. ಕೆ.ಜೆ.ಯು. ದ.ಕ. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.


ಕ್ರೀಡಾಕೂಟದಲ್ಲಿ ಮಕ್ಕಳಿಗೆ ಲಕ್ಕಿ ಗೇಮ್, ಓಟದ ಸ್ಪರ್ಧೆ, ಪುರುಷರಿಗೆ ಗುಂಡೆಸೆತ, ಹಗ್ಗಾಜಗ್ಗಾಟ, ನಿಧಾನ ಬೈಕ್ ರೇಸ್, ಲಕ್ಕಿ ಗೇಮ್, ನಿಧಾನ ನಡಿಗೆ, ಪಿಕ್ ಆಂಡ್ ಆಕ್ಟ್, ಮಹಿಳೆಯರಿಗೆ ಹಗ್ಗಾಜಗ್ಗಾಟ, ಗುಂಡೆಸೆತ, ಸಂಗೀತ ಕುರ್ಚಿ, ನಿಧಾನ ಸ್ಕೂಟಿ ರೇಸ್, ಪಿಕ್ ಆಂಡ್ ಆಕ್ಟ್, ಪುರುಷರಿಗೆ ಮತ್ತು ಮಹಿಳೆಯರಿಗೆ ಗುಂಪು ಸ್ಪರ್ಧೆ ನೋಂಡಿ ಓಟ, ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಕೆ.ಜೆ.ಯು ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಈಶ್ವರ ವಾರಣಾಶಿ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾದ ಮಡಪ್ಪಾಡಿ ಗ್ರಾ.ಪಂ ಅಧ್ಯಕ್ಷ ಮಿತ್ರದೇವ ಮಡ್ಡಪಾಡಿ, ಸುಳ್ಯದ ಯುವ ಉದ್ಯಮಿ ಶಾಫಿ ಕುತ್ತಮೊಟ್ಟೆ, ಸುಳ್ಯದ ಓಂಶಕ್ತಿ ಎಂಟರ್‌ಪ್ರೈಸಸ್ ಮಾಲಕ ಜಗದೀಶ್, ದೈಹಿಕ ಶಿಕ್ಷಣ ಶಿಕ್ಷಕ ಶಶಿಧರ ಎಂ.ಜೆ ದುಗ್ಗಲಡ್ಕ, ಕೆ.ಜೆ.ಯು ಸುಳ್ಯ ಘಟಕದ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಕಾರ್ಯದರ್ಶಿ ಶ್ರೀಮತಿ ಜಯಶ್ರೀ ಕೊಯಿಂಗೋಡಿ, ಕೋಶಾಧಿಕಾರಿ ವಿನಯ್ ಜಾಲ್ಸೂರು, ಸುದ್ದಿ ಮಾಹಿತಿ ವಿಭಾಗದ ಮುಖ್ಯಸ್ಥ ಕೃಷ್ಣ ಬೆಟ್ಟ, ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಜೊತೆಗೆ ಭಾಗವಹಿಸಿದ ಎಲ್ಲಾ ಪುಟಾಣಿ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕೆ.ಜೆ.ಯು ಕ್ರೀಡಾ ಕಾರ್ಯದರ್ಶಿ ಕೆ.ಟಿ.ಭಾಗೀಶ್ ಸ್ವಾಗತಿಸಿದರು. ಕೆ.ಜೆ.ಯು ದ.ಕ ಜಿಲ್ಲಾ ಕಾರ್‍ಯಕಾರಿ ಸಮಿತಿ ಸದಸ್ಯ ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಕೆ.ಜೆ.ಯು ಸುಳ್ಯ ತಾಲೂಕು ಘಟಕದ ಸದಸ್ಯರು ಉಪಸ್ಥಿತರಿದ್ದರು.