ಅಯೋಧ್ಯೆಯ ಶ್ರೀ ರಾಮನ ಪವಿತ್ರ ಮಂತ್ರಾಕ್ಷತೆ ಸುಳ್ಯದ ರಾಮ ಮಂದಿರಕ್ಕೆ ಆಗಮನ

0

ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಾಮನ ಮಂತ್ರಾಕ್ಷತೆಯ ಪುರ ಪ್ರವೇಶ

ಮಂದಿರದಲ್ಲಿ ಪೂಜಿಸಲ್ಪಡುವ ಮಂತ್ರಾಕ್ಷತೆ ಪ್ರತಿ ಹಿಂದೂ ಮನೆಗೆ ತಲುಪಲಿದೆ

ಅಯೋಧ್ಯೆಯಿಂದ ಶ್ರೀ ರಾಮನ ಪವಿತ್ರ ಮಂತ್ರಾಕ್ಷತೆಯ ಪುರ ಪ್ರವೇಶವು ಇಂದು ಸಂಜೆ ಸುಳ್ಯದ ಶ್ರೀರಾಮ ಪೇಟೆಯಲ್ಲಿರುವ ಶ್ರೀ ರಾಮ ಭಜನಾ ಮಂದಿರಕ್ಕೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮೆರವಣಿಗೆಯ ಮೂಲಕ ಆಗಮಿಸಿತು.

ಸಂಜೆ ಪುತ್ತೂರಿನಿಂದ ಎಡನೀರು ಮಠದ ಸ್ವಾಮೀಜಿಯವರು ಸುಳ್ಯದ ಸಂಘ ಪರಿವಾರ ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಸಂಘಟನೆಯ ಪ್ರಮುಖರಿಗೆ ಪವಿತ್ರ ಮಂತ್ರಾಕ್ಷತೆಯನ್ನು ಹಸ್ತಾಂತರ ಮಾಡುವ ಮೂಲಕ ಯಾತ್ರೆಗೆ ಶುಭ ಹಾರೈಸಿದರು.

ಅಲ್ಲಿಂದ ಸಾಗಿ ಬಂದ ಯಾತ್ರೆಯು ಸುಳ್ಯದ ಶ್ರೀರಾಮ ಪೇಟೆಗೆ ತಲುಪುವ ಸಂದರ್ಭದಲ್ಲಿ ಮಹಿಳೆಯರು ಪೂರ್ಣ ಕುಂಭ ಸ್ವಾಗತದೊಂದಿಗೆ ಹಾಗೂ ಚೆಂಡೆ ವಾದ್ಯ ಘೋಷದೊಂದಿಗೆ
ಶ್ರೀ ರಾಮ ಭಜನಾ ಮಂದಿರದ ತನಕ ಕಾಲ್ನಡಿಗೆಯಲ್ಲಿ ಸಾಗಿ ಬಂದು ಬಳಿಕ ಮಂದಿರದಲ್ಲಿ ಪೂಜೆಯು ನೆರವೇರಿತು.

ಸುಳ್ಯ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಸಂಘ ಪರಿವಾರದ ಸಂಘಟನೆಯ ಪ್ರಮುಖರು ಹಾಗೂ ಕಾರ್ಯಕರ್ತರು ಪವಿತ್ರ ಮಂತ್ರಾಕ್ಷತೆಯನ್ನು ಭಕ್ತಿ ಪೂರ್ವಕವಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಸದಸ್ಯರು ಮಹಿಳಾ ಮಂಡಲದ ಸದಸ್ಯರು ಮಹಿಳೆಯರು ಹಾಗೂ ಸಂಘಟನೆಯ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಪುರೋಹಿತ್ ನಾಗರಾಜ್ ಭಟ್ ರವರ ನೇತೃತ್ವದಲ್ಲಿ ಮಂತ್ರಘೋಷದೊಂದಿಗೆ ಮಂದಿರದ ಅರ್ಚಕರು ಮಂತ್ರಾಕ್ಷತೆಗೆ ಮಹಾ ಮಂಗಳಾರತಿಯನ್ನು ಬೆಳಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಚಂದ್ರಶೇಖರ್ ತಳೂರು ರವರು “ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯು ಡಿ. 5 ರ ತನಕ ರಾಮ ಮಂದಿರದಲ್ಲಿ ಪೂಜಿಸಲ್ಪಡುವುದು. ಪ್ರತಿದಿನ ಅರ್ಚಕರ ನೇತೃತ್ವದಲ್ಲಿ ಮಂತ್ರಾಕ್ಷತೆಗೆ ಪೂಜೆ ಮಹಾ ಮಂಗಳಾರತಿಯು ನಡೆಯಲಿರುವುದು.
ಈ ಸಂದರ್ಭದಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.
ಡಿ. 5 ರಂದು ಸುಳ್ಯದ ಸಿ.ಎ ಬ್ಯಾಂಕಿನ ಸಭಾಭವನದಲ್ಲಿ ಪೂರ್ವಭಾವಿ ಸಭೆಯು ನಡೆಯಲಿದ್ದು ಹಿಂದೂ ಬಾಂಧವರ ಮನೆ ಮನೆಗೆ ಮಂತ್ರಾಕ್ಷತೆಯನ್ನು ತಲುಪಿಸುವ ಬಗ್ಗೆ ಚಿಂತನೆ ನಡೆಸಲಾಗುವುದು.
ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀ ರಾಮನ
ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರವನ್ನು ಹಾಗೂಮಂತ್ರಾಕ್ಷತೆಯನ್ನು ಪ್ರತಿ ಬೂತ್ ಮಟ್ಟದಲ್ಲಿ ಹಿಂದೂ ಕಾರ್ಯಕರ್ತರ ಸಮಿತಿಗಳನ್ನು ರಚಿಸಿಕೊಂಡು ಪ್ರತಿ ಮನೆಗೆ ತಲುಪಿಸುವ ಕಾರ್ಯದ ಸಮಾಲೋಚನೆಯನ್ನು ಶಿಶ್ತು ಬದ್ಧವಾಗಿ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಅಂಗಾರ, ಶಾಸಕಿ ಕು.ಭಾಗೀರಥಿ ಮುರುಳ್ಯ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್, ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರ.ಕಾರ್ಯದರ್ಶಿ ಅಕ್ಷಯ್ ಕೆ.ಸಿ, ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಸೋಮಶೇಖರ್ ಪೈಕ, ಬಜರಂಗದಳ ಜಿಲ್ಲಾ ಸಹಸಂಚಾಲಕ ಲತೀಶ್ ಗುಂಡ್ಯ, ಬಜರಂಗದಳ ಸುಳ್ಯ ನಗರ ಸಂಚಾಲಕ ವರ್ಷಿತ್ ಚೊಕ್ಕಾಡಿ, ಪ್ರಮುಖರಾದ ಕೃಷ್ಣ ಕಾಮತ್ ಅರಂಬೂರು, ಶ್ರೀ ಕೃಷ್ಣ ಸೋಮಯಾಗಿ, ಹರೀಶ್ ಕಂಜಿಪಿಲಿ, ಸುಧಾಕರ್ ಕಾಮತ್ ಅಡ್ಕಾರ್, ಗೋಪಾಲಕೃಷ್ಣ ಭಟ್ ಶಾಂತಿನಗರ, ವೆಂಕಟ್ ದಂಬೆಕೋಡಿ, ಸುಭೋದ್ ಶೆಟ್ಟಿ ಮೇನಾಲ,
ಮಧು ಸೂಧನ್ ಕುಂಭಕೋಡು, ವೆಂಕಟ್ ವಳಲಂಬೆ, ಉಮೇಶ್ ಪಿ.ಕೆ, ಡಾ.ಎನ್.ಎ ಜ್ಞಾನೇಶ್, ದೇವಿಪ್ರಸಾದ್ ಅತ್ಯಾಡಿ, ನವೀನ್ ಎಲಿಮಲೆ, ಹರಿಪ್ರಸಾದ್ ಎಲಿಮಲೆ,ಸನತ್ ಚೊಕ್ಕಾಡಿ, ಸುನಿಲ್ ಕೇರ್ಪಳ,
ರಜತ್ ಅಡ್ಕಾರ್,
ಬೂಡು ರಾಧಾಕೃಷ್ಣ ರೈ ಜಿ.ಜಿ ನಾಯಕ್, ಮಹೇಶ್ ಕುಮಾರ್ ಮೇನಾಲ, ವಿನಯ್ ಕಂದಡ್ಕ, ಪ್ರಭಾಕರ ನಾಯಕ್, ಸೋಮನಾಥ ಪೂಜಾರಿ, ಚನಿಯ ಕಲ್ತಡ್ಕ, ವಿನಯ ಮುಳುಗಾಡು, ಶ್ರೀಕಾಂತ್ ಕಲ್ಲಪಳ್ಳಿ,
ಶ್ರೀಮತಿ ಶೋಭಾ ಚಿದಾನಂದ, ಶ್ರೀಮತಿ ಯಶೋಧ ರಾಮಚಂದ್ರ,ಶ್ರೀಮತಿ ಶ್ರೀದೇವಿ ನಾಗರಾಜ್ ಭಟ್, ಶ್ರೀಮತಿ ಹರ್ಷ ಕರುಣಾಕರ, ಶ್ರೀಮತಿ ಶಶಿಕಲಾ ಹರಪ್ರಸಾದ್ ತುದಿಯಡ್ಕ, ಶ್ರೀಮತಿ ಶಶಿಕಲಾ ನೀರಬಿದಿರೆ, ಶ್ರೀಮತಿ ಸರಸ್ವತಿ ಬೆಟ್ಟಂಪಾಡಿ, ಡಾ.ಶ್ರೀವಿದ್ಯಾ,
ಭಜನಾಮಂದಿರದ ಧರ್ಮದರ್ಶಿ ಮಂಡಳಿ‌ಯ ಮಹಾಬಲ ಕೇರ್ಪಳ, ಭಾಸ್ಕರ ನಾಯರ್, ಶ್ರೀನಿವಾಸ್, ಗೋಪಾಲ ನಡುಬೈಲು, ಅನಿಲ್ ಕುಮಾರ್ ಕೇರ್ಪಳ, ಆನಂದ ಬೆಟ್ಟಂಪಾಡಿ ಮತ್ತಿತರರು ಭಾಗವಹಿಸಿದರು.
ವಿ.ಹೆಚ್.ಪಿ ಬಜರಂಗದಳದ ಕಾರ್ಯಕರ್ತರು ಸಹಕರಿಸಿದರು. ಆಗಮಿಸಿದ ಎಲ್ಲರಿಗೂ ಪಾನಕ ಹಾಗೂ ಸಿಹಿ ತಿಂಡಿ ವಿತರಿಸಲಾಯಿತು.