ಅಸ್ಸಯ್ಯಿದ್ ಮಾಂಬ್ಳಿ ತಂಙಳ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ
ಇಂದು ಅನುಷ್ಮರಣಾ ಪ್ರಭಾಷಣ ನಡೆಸಲಿರುವ ಮಹಮ್ಮದ್ ಅನಸ್ ಅಮಾನಿ ಪುಷ್ಪಗಿರಿ
ಮೊಗರ್ಪಣೆ ಸುನ್ನಿ ಬಾಲ ಸಂಘ ಎಸ್ ಬಿ ಎಸ್ ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸ ವತಿಯಿಂದ ಡಿ.2 ಹಾಗೂ 3 ರಂದು ನಡೆಯಲಿರುವ ತಾಜುಲ್ ಉಲಮಾ ನೂರುಲ್ ಉಲಮಾ ಹಾಗೂ ಅಗಲಿದ ನೇತಾರರ ಅನುಷ್ಮರಣಾ ಕಾರ್ಯಕ್ರಮಕ್ಕೆ ಡಿಸೆಂಬರ್ 2 ರಂದು ಮೊಗರ್ಪಣೆ ಮುಹಿಯದ್ದೀನ್ ಜುಮ್ಮಾ ಮಸೀದಿ ವಠಾರದಲ್ಲಿ ಚಾಲನೆ ನೀಡಲಾಯಿತು.
ಸ್ಥಳೀಯ ಖತೀಬರಾದ ಹಾಫಿಲ್ ಶೌಕತ್ ಅಲೀ ಸಕಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅನುಷ್ಮರಣಾ ಸಂದೇಶ ಭಾಷಣವನ್ನು ಮಾಡಿದರು.
ಸಂಜೆ 5 ಗಂಟೆಗೆ ಅಸ್ಸಯ್ಯಿದ್ ಮಾಂಬ್ಳಿ ವಲಿಯವರ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಜಯನಗರ ದುವಾ ನೆರವೇರಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ವಹಿಸಿದ್ದರು.
ವೇದಿಕೆಯಲ್ಲಿ ಸ್ಥಳೀಯ ಕಮಿಟಿ ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ,ಉಪಾಧ್ಯಕ್ಷ ಸಿ ಎಂ ಉಸ್ಮಾನ್, ನಿರ್ದೇಶಕರುಗಳಾದ ಜಿ ಕೆ ರಝಾಕ್, ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಪಳ್ಳಿಕುಂಞಿ,ಕಾರ್ಯದರ್ಶಿ ಮೊೈದೀನ್ ಕೆ ಎಂ, ಸ್ಥಳೀಯ ಮದರಸಾ ಅಧ್ಯಾಪಕರುಗಳಾದ ಯೂಸುಫ್ ನಿಝಾಮಿ,ಸಿದ್ದೀಕ್ ಸಕಾಫಿ,ಶಫೀಕ್ ಹಿಮಮಿ,ಅಬ್ದುಲ್ ರಶೀದ್ ಝೈನಿ,ಮುಖಂಡರು ಗಳಾದ ಹಾಜಿ ಉಮ್ಮರ್,ಬಶೀರ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಖ್ಯಾತ ಬುರ್ದಾ ಗಾಯಕರ ತಂಡ ಅಶ್ರಫ್ ಮುಸ್ಲಿಯರ್ ಪೆರುಮುಗಂ ಸಂಗಡಿಗರಿಂದ ಬುರ್ದಾ ಮಜ್ಲೀಸ್ ಇಶಲ್ ನೈಟ್ ನಡೆಯಿತು.
ಸ್ಥಳೀಯ ಮದರಸ ಸದರ್ ಮುಅಲ್ಲಿಂ ಅಬ್ದುಲ್ ಕರೀಂ ಸಕಾಫಿ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಮುಅಲ್ಲಿಂರಾದ ಮೂಸಾ ಮುಸ್ಲಿಯರ್, ಹಂಝ ಸಕಾಫಿ, ಅಬ್ದುಲ್ ನಾಸಿರ್ ಸಕಾಫಿ,ಸಮಿತಿಯ ಮುಖಂಡ ಅನೀಫ್ ಪೋಸೋಟು, ಎಸ್ ಬಿ ಎಸ್ ಪದಾಧಿಕಾರಿಗಳು ಸದಸ್ಯರು ಸಹಕರಿಸಿದರು.
ಸಮಾರೋಪ ಸಮಾರಂಭದ ಇಂದು ಅನುಷ್ಮರಣಾ ಪ್ರಭಾಷಣವನ್ನು ಖ್ಯಾತ ವಾಗ್ಮಿ ಮೊಹಮ್ಮದ್ ಅನಸ್ ಅಮಾನಿ ಪುಷ್ಪಗಿರಿ ಮಾಡಲಿದ್ದಾರೆ.ದುವಾ ನೇತೃತ್ವವನ್ನು ಸಯ್ಯದ್ ಕುಂಞಿ ಕೋಯ ತಂಙಳ್ ಸಅದಿ ಸುಳ್ಯ ನೆರವೇರಿಸಲಿದ್ದಾರೆ.
ಬಳಿಕ ಅನ್ನದಾನ ಕಾರ್ಯಕ್ರಮ ನಡೆದು ಸಮಾರೋಪ ಗೊಳ್ಳಲಿದೆ.