ಬಾಂಜಿಕೋಡಿಯಲ್ಲಿ ಚುನಾವಣಾ ಬಹಿಷ್ಕಾರ ಬ್ಯಾನರ್ ಪ್ರತ್ಯಕ್ಷ

0

ಬ್ಯಾನರಲ್ಲಿ ಬೃಹತ್ ಕರೆ ಗಂಟೆಯ ಎಚ್ಚರಿಕೆ

ಐವರ್ನಾಡು ಗ್ರಾಮದ ಬಾಂಜಿಕೋಡಿಯ ರಸ್ತೆ ಬದಿಯಲ್ಲಿ ಡಿ.3 ರಂದು ಬೆಳಿಗ್ಗೆ ಚುನಾವಣಾ ಬಹಿಷ್ಕಾರದ ಬ್ಯಾನರ್
ಪ್ರತ್ಯಕ್ಷವಾಗಿದೆ.


ಬ್ಯಾನರಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರ ವಾರ್ಡ್ ನ ಮತದಾರ ಪ್ರಭುಗಳ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸವಾರರಿಗೆ ಹಾಗೂ ಪಾದಾಚಾರಿಗಳಿಗೆ ಬಹಳ ತೊಂದರೆಯಾಗಿದೆ‌.ಸಂಬಂಧಪಟ್ಟ ಅಧಿಕಾರಿಗಳು,ಜನಪ್ರತಿನಿಧಿಗಳು ಇದರ ಬಗ್ಗೆ ಗಮನಹರಿಸುತ್ತಿಲ್ಲ.
ಇದರಿಂದ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವುದು ಮತ್ತು ರಸ್ತೆ ತಡೆ, ಉಗ್ರ ಪ್ರತಿಭಟನೆ ನಡೆಸಲಾಗುವುದು ಬೃಹತ್ ಕರೆಗಂಟೆ ಎನ್ನುವ ಬ್ಯಾನರ್ ಅಳವಡಿಸಿದ್ದಾರೆ.


ಎಲ್ಲಾ ಹಿರಿಯ ನಾಗರಿಕರು,ಮತದಾರ ಪ್ರಭುಗಳು ಬಾಂಜಿಕೋಡಿ ಐವರ್ನಾಡು ಎಂದು ಬ್ಯಾನರಲ್ಲಿ ಬರೆಯಲಾಗಿದೆ.