ಸುಳ್ಯ ಗಾಂಧಿನಗರದ ಮಲೆನಾಡು ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಅನ್ಸಾರ್ ಕಾಂಪ್ಲೆಕ್ಸ್ ಗಾಂಧಿನಗರದಲ್ಲಿ ಡಿ.2 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಸುಳ್ಯ ಅಂಚೆ ಕಛೇರಿಯ ಪೋಸ್ಟ್ ಮಾಸ್ಟರ್ ಮೋಹನ್ ಎಂ.ಕೆ ಅಧಾರ್ ಸದುಪಯೋಗದ ಬಗ್ಗೆ ಮಾತನಾಡಿದರು. ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ .ಎಸ್ ಮಾತನಾಡಿ ಮಲೆನಾಡು ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿರುವ ಸಮಾಜ ಸೇವೆ ಅನನ್ಯ ಜನಸಾಮಾನ್ಯರಿಗೆ ಉಪಕಾರಿ ಆಗುವಂತಹ ಕೆಲಸ ಮಾಡುತ್ತಾ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಅನ್ಸಾರ್ ಮಾಜಿ ಅಧ್ಯಕ್ಷ ಹಾಜಿ ಹಮೀದ್ ಜನತಾ, ಅಬೂಬಕ್ಕರ್ ಪಾರೆಕಲ್ಲ್ , ರಶೀದ್ ಜಟ್ಟಿಪಳ್ಳ, ಟ್ರಸ್ಟಿ ಇಬ್ರಾಹಿಂ ಕೆ.ಬಿ, ಅಮೀರ್ ಕುಕ್ಕುಂಬಳ್ಳ, ಗಣೇಶ್ ನಾಗ ಪಟ್ಟಣ, ಕುಮಾರ್ ನಾಗ ಪಟ್ಟಣ, ಮೊದಲಾದವರು ಉಪಸ್ಥಿತರಿದ್ದರು.
ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅನ್ಸಾರ್ ಅಧ್ಯಕ್ಷ ಹಾಜಿ ಶುಕುರ್ ಅನ್ಸಾರ್ ಕಾರ್ಯದರ್ಶಿ ಅಬ್ದುಲ್ ಹನೀಫ್ ಜನತಾ, ಶಾಫಿ ಕುತ್ತಮೊಟ್ಟೆ ಇಸ್ಮಾಯಿಲ್ ಕುಂಬ್ಲೆ , ಆದ ಹಾಜಿ ಕಮ್ಮಾಡಿ, ಜೇಸಿ.ಯು ಪಿ ಬಶೀರ್ ಬೆಳ್ಲಾರೆ, ಜೇಸಿ. ವಿಷ್ಣು ಪ್ರಕಾಶ್ ನಾರ್ಕೋಡು, ಪಿ.ಎ ಮಹಮ್ಮದ್, ಮನ್ಸೂರ್ ಮೆಟ್ರೋ, ಸೆಲೀಂ ಪೆರಿಂಗೋಡಿ ರಾಮಚಂದ್ರ ಪೆಲ್ತಡ್ಕ ,ಕುಮಾರ್ ನಾಗಪಟ್ಣಣ ಭವಾನಿ ಶಂಕರ ಸಂಶುದ್ದಿನ್ ಕೆ.ಎಮ್ , ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಅಂಚೆ ಕಛೇರಿಯ ಆಧಾರ್ ಸಹಯೊಜಕರು ನೊಂದಣಿ ಕಾರ್ಯಕ್ರಮ ನಡೆಸಿಕೊಟ್ಟರು.ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಝ್ ಕಟ್ಟೆಕ್ಕಾರ್ ಎಲ್ಲಾ ವ್ಯವಸ್ಥೆ ಸಜ್ಜುಗೊಳಿಸಿದರು.
ಟ್ರಸ್ಟಿ ಶಹೀದ್ ಪಾರೆ,ಟ್ರಸ್ಟಿ ನಾಸಿರ್ ಉಗ್ರಾಣಿ ಮನೀರ್ ಅನ್ಸಾರ್ ಸೆಮೀರ್ ಕುಂಬ್ಲೆ ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.ಸುಮಾರು 70 ಕ್ಕೂ ಅಧಿಕ ಜನರು ಆಧಾರ್ ನ ವಿವಿಧ ಸೇವೆ ಮತ್ತು ಸೌಲಬ್ಯ ಪಡೆದುಕೊಂಡರು. ಕೊನೆಯಲ್ಲಿ ರಿಯಾಝ್ ಕಟ್ಟಿಕ್ಕಾರ್ ಸ್ವಾಗತಿಸಿ ಅಮೀರ್ ಕುಕ್ಕುಂಬಳ್ಳ ಧನ್ಯವಾದ ಸಲ್ಲಿಸಿದರು.