ಸೋಣಂಗೇರಿ – ಬೇಂಗಮಲೆ ರಸ್ತೆ ಅಗಲೀಕರಣ ಕಾಮಗಾರಿ ಮತ್ತೆ ಪ್ರಾರಂಭ

0

ಸೋಣಂಗೇರಿಯಿಂದ ಬೇಂಗಮಲೆ ವರೆಗೆ ರಸ್ತೆ ಅಗಲೀಕರಣ ಕಾಮಗಾರಿ ಮತ್ತೆ ಪ್ರಾರಂಭಗೊಂಡಿದೆ.


ಮಳೆಗಾಲದ ಮೊದಲು ರಸ್ತೆ ಕಾಮಗಾರಿ ಪ್ರಾರಂಭಗೊಂಡಿತ್ತು. ಆದರೆ ಮಳೆಯ ಕಾರಣ ಬರೆಯಲ್ಲಿರುವ ಕಲ್ಲುಗಳು ಉರುಳಿ ಬೀಳತೊಡಗಿದುದರಿಂದ ಕೆಲಸ ಮಾಡಲು ಅಸಾಧ್ಯವೆಂದು ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು.


ಈಗ ಜೆಸಿಬಿ ಮೂಲಕ ಕೆಲಸ ಪ್ರಾರಂಭಗೊಂಡಿದ್ದು ರಸ್ತೆಯಲ್ಲಿ ಮೋರಿ ಕೆಲಸ ನಡೆಯುತ್ತಿದೆ.
ವಾಹನ ಸಂಚಾರಕ್ಕೆ ಮೋರಿಯ ಒಂದು ಬದಿಯಲ್ಲಿ ಮಣ್ಣು ಹಾಕಿ ರಸ್ತೆ ನಿರ್ಮಿಸಲಾಗಿದೆ.


ಈ ರಸ್ತೆ ಹಲವು ಸಮಯಗಳಿಂದ ಹೊಂಡಗುಂಡಿಗಳಿಂದ ಕೂಡಿದ್ದು ತೀವ್ರ ಹದಗೆಟ್ಟು ವಾಹನ ಸವಾರರಿಗೆ ಅನಾನುಕೂಲವಾಗಿತ್ತು. ಈಗ ಕಾಮಗಾರಿ ನಡೆಯತೊಡಗಿರುವುದರಿಂದ ಸಂಚಾರ ಕಷ್ಟವಾಗುತ್ತಿದ್ದರೂ ಜನರಿಗೆ ಸಮಾಧಾನ ಮೂಡಿದೆ.