ಕೆವಿಜಿ ಸುಳ್ಯಹಬ್ಬ ಸಮಾಜ ಸೇವಾ ಸಂಘ ರಿ ಸುಳ್ಯ , ಕೆ ವಿಜಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ, ಕೆವಿಜಿ ಆಯುರ್ವೇದ ಮಹಾ ವಿದ್ಯಾಲಯ ಹಾಗು ಮಡಪ್ಪಾಡಿ ಯ ವಿವಿದ ಸಂಘಟನೆಗಳ ಸಹಕಾರದೊಂದಿಗೆ ಮಡಪ್ಪಾಡಿಯಲ್ಲಿ ಬ್ರಹತ್ ಉಚಿತ ವೈದ್ಯಕೀಯ ಶಿಬಿರವನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಉಷಾ ಜಯರಾಮ್ ಇವರು ನೇರವೇರಿಸಿ ಗ್ರಾಮೀಣ ಪ್ರದೇಶದ ಜನರಿಗೆ ಈ ಶಿಬಿರದ ಮೂಲಕ ಆರೊಗ್ಯ ಸಮಸ್ಯೆಗಳಿಗೆ ಪರಿಹಾರ ದೊರಕುವಂತಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಈ ಭಾಗದ ಜನಪ್ರಿಯ ಪ್ರಥಮ ವೈದ್ಯರು ಹಾಗು ತಾಲೂಕು ಆರೊಗ್ಯಾಧಿಕಾರಿ ಡಾ.ನಂದಕುಮಾರ್ ಇವರಿಗೆ ಗೌರವ ಪೂರ್ವಕ ಸನ್ಮಾನ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಕೆವಿಜಿ ಸುಳ್ಯ ಹಬ್ಬದ ಪೂರ್ವಾಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಪಿ ಸಿ ಜಯರಾಮ್, ಶಾಲಾಭಿವ್ರದ್ದಿ ಸಮಿತಿ ಅದ್ಯಕ್ಷರಾದ ಸಚಿನ್ ಬಳ್ಳಡ್ಕ ಉಪಸ್ತಿತರಿದ್ದರು.
ಕಾರ್ಯಕ್ರಮದ ವೇದಿಕೆಯಲ್ಲಿ ವಿವಿದ ಸಂಘಟನೆಗಳ ಪದಾಧಿಕಾರಿಗಳು ಆದ ಜನಾರ್ದನ್ ನಾಯ್ಕ್, ದಿನೇಶ್ ಅಂಬೆಕಲ್, ಲೋಹಿತ್ ಮಡಪ್ಪಾಡಿ, ಡಾ ಗೀತಾ ದೊಪ್ಪ, ಡಾ. ಹರ್ಷಿತಾ ಪುರುಷೊತ್ತಮ್,ಕಿರಣ್ ಶೀರಡ್ಕ, ಶಕುಂತಲಾ ಕೇವಳ, ವಾಣಿ ಮುಳುಗಾಡು, ದುಶ್ಯಂತ್ ಶೀರಡ್ಕ, ಎಮ್ ಜಿ ಲೋಕಯ್ಯ ಹಾಗು ಜಯರಾಮ್ ಕಡ್ಲಾರು ಉಪಸ್ತಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ಇದರ ಅಧ್ಯಕ್ಷರಾದ ಚಂದ್ರಶೇಖರ ಪೇರಾಲ್ ಇವರು ವಹಿಸಿದರು. ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ದಿಂದ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಕೆವಿಜಿ ಹಬ್ಬ ಸಮಿತಿ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಶಾಲಾ ಮುಖ್ಯ ಶಿಕ್ಷಕ ಜಗದೀಶ್ ವಂದಿಸಿದರು. ಶಾಲಾ ಶಿಕ್ಷಕ ಕುಶಾಲಪ್ಪ ಇವರು ಕಾರ್ಯಕ್ರಮ ನಿರೂಪಿಸಿದರು.