ಕೆ.ವಿ.ಜಿ ಐಪಿಎಸ್ ನ ವಿದ್ಯಾರ್ಥಿಗಳ ಸಾಧನೆ

0

ಬ್ರಹ್ಮಗಿರಿ ಸಹೋದಯ ಕಾಂಪ್ಲೆಕ್ಸ್ ಕೊಡಗು ಇದರ ಸಹಯೋಗದಲ್ಲಿ ಡಿ.4 ರಂದು ಮ್ಯಾನ್ಸ್ ಕಾಂಪೌಂಡ್ ಮಡಿಕೇರಿಯಲ್ಲಿ ವಿವಿಧ ಆಟೋಟ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಹಲವು ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆಯನ್ನು ಮಾಡಿರುತ್ತಾರೆ.

ಪ್ರಾಥಮಿಕ ವಿಭಾಗದ ಬ್ರೋಡ್ ಜಂಪ್ ನಲ್ಲಿ ಐದನೇ ತರಗತಿಯ ವಂಶಿಕ್ ಪ್ರಥಮ ಸ್ಥಾನವನ್ನು ಪಡೆದರೆ, ಐದನೇ ತರಗತಿಯ ತ್ವಯಿಬಾ ಫಾತಿಮಾ ಬ್ರೋಡ್ ಜಂಪ್ ನಲ್ಲಿ ಪ್ರಥಮ, 100 ಮೀಟರ್ ಓಟದಲ್ಲಿ ದ್ವಿತೀಯ, ರಿಲೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ. ಅದೇ ರೀತಿ 5ನೇ ತರಗತಿಯ  ಹಾದಿ ಸನಾದ್ 100 ಮೀಟರ್ ಓಟದಲ್ಲಿ ತೃತೀಯ, ಅಸ್ಲಾಂ, ಹಾದಿ, ಆನಸ್ ಹಿನಾನ್ ಮಾಝಿ ರಿಲೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
 ಹುಡುಗಿಯರ ವಿಭಾಗದಲ್ಲಿ ನಾಲ್ಕನೇ ತರಗತಿಯ ಸಮೀಕ್ಷಾ, ಅಪರ್ಣ, ಶಿಝ ರಿಲೇ ಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಿರಿಯ ಪ್ರಾಥಮಿಕ ವಿಭಾಗದ ರಿಲೆಯಲ್ಲಿ ಏಳನೇ ತರಗತಿಯ ಪ್ರತೀಕ್ಷ ಎಂಟನೇ ತರಗತಿಯ ಪ್ರತೀಕ, ನಶ್ವ ಮತ್ತು ಸೀಮಾ ಆಯಿಷಾ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪ್ರೌಢಶಾಲಾ ವಿಭಾಗದ ಉದ್ದ ಜಿಗಿತದಲ್ಲಿ ಹತ್ತನೇ ತರಗತಿಯ ಸಾಕ್ಷಿ ಪ್ರಥಮ ಸ್ಥಾನವನ್ನು ಪಡೆದರೆ, ರಿಲೇಯಲ್ಲಿ ಹತ್ತನೇ ತರಗತಿಯ  ಸಾಕ್ಷಿ,9ನೇ ತರಗತಿಯ ಸಾನ್ವಿ ಎಂಟನೇ ತರಗತಿಯ ನಿಧ ಫಾತಿಮಾ ಮತ್ತು 7ನೇ ತರಗತಿ ಯ ರಿದಾ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಾದ ತೀರ್ಥವರ್ಣ ಬಳ್ಳಡ್ಕ, ಶ್ರೀಮತಿ ಸುಪ್ರಿಯ ಮತ್ತು ಆಶಾ ಜ್ಯೋತಿ ಮಾರ್ಗದರ್ಶನ ನೀಡಿದರು. ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಮತ್ತು ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರವೃಂದದವರು  ಅಭಿನಂದಿಸಿದರು.