ಗುತ್ತಿಗಾರು ಸೈoಟ್ ಮೇರಿಸ್ ಚರ್ಚ್ ಸಭಾಂಗಣದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸೆ ಉದ್ಘಾಟನೆ

0

ಸೈoಟ್ ಮೇರಿಸ್ ಚರ್ಚ್ ಗುತ್ತಿಗಾರು ಸಭಾಂಗಣದಲ್ಲಿ ಉಚಿತ ಫೂಟ್ ಪುಲ್ಸ್, ಥೆರಪಿ ಚಿಕೆತ್ಸೆ ಡಿ.7 ರಂದು ಉದ್ಘಾಟನೆ ಗೊಂಡಿತು. ಸೈoಟ್ ಮೇರಿಸ್ ಚರ್ಚ್, ಗುತ್ತಿಗಾರು, ಗ್ರಾಮ ಪಂಚಾಯತ್ ಗುತ್ತಿಗಾರು, ಲಯನ್ಸ್ ಕ್ಲಬ್ ಗುತ್ತಿಗಾರು, ವರ್ತಕ ಸಂಘ ಗುತ್ತಿಗಾರು, ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ಹಾಗೂ ಕಂಪನಿಯೋ ನೆಮ್ಮದಿ ವೆಲ್ನೆಸ್ ಸೆಂಟರ್ ಪುತ್ತೂರು ಇದರ ಸಹಯೋಗದಲ್ಲಿ ಡಿ. 7 ರಿಂದ ಡಿ. 21 ವರಗೆ ನಡಯಲಿದೆ.

ಸೈoಟ್ ಮೇರಿಸ್ ಚರ್ಚ್, ಗುತಿಗಾರು, ಸಭಾಂಗಣದಲ್ಲಿ ನಡಯುವ ಉಚಿತ ಫೂಟ್ ಪುಲ್ಸ್ ಥೆರಪಿ ಶಿಬಿರವನ್ನು ಮೈತ್ರಯ ಕ್ಲಿನಿಕ್ ಎಲಿಮಲೆ ಡಾ. ಚೈತ್ರ ಭಾನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಗುರು ಫಾ. ಆದರ್ಶ್ ಜೋಸೆಫ್ ವಹಿಸಿದ್ದರು. ಕ್ಯಾಂಪನಿಯೋ ಸಂಸ್ಥೆಯ ಮುಖ್ಯಸ್ಥ ಪ್ರಭಾಕರ ಸಾಲಿಯಾನ್ ಫೂಟ್ ಪಲ್ಸ್ ಥೆರಪಿಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ಮೂಕಮಲೆ, ಲಯನ್ಸ್ ಅಧ್ಯಕ್ಷರಾದ ಜಯರಾಮ ಕಡ್ಲಾರು, ವರ್ತಕರ ಸಂಘದ ಶಿವರಾಮ ಕರುವಜೆ, ಅಮರ ಚಾರಿಟೇಬಲ್ ನ ಚಂದ್ರಶೇಖರ ಕಡೋಡಿ ಚರ್ಚ್ ನ ಸದಸ್ಯರಾದ ಲಿಜೋ ಜೋಶ್, ಶೈಜು, ಟಿಜಿ ಉಪಸ್ಥಿತರಿದ್ದರು.