⬆️ ದ.16: ಶತಮಾನೋತ್ತರ ದಶಮಾನೋತ್ಸವ ಸಂಭ್ರಮ
⬆️ ದ.12: ಸದಸ್ಯರಿಗೆ ರಸ ಪ್ರಶ್ನೆ,ಹಗ್ಗಜಗ್ಗಾಟ
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ತರ ದಶಮಾನೋತ್ಸವ ಸಂಭ್ರಮವು ದ.16 ರಂದು ಪೂರ್ವಾಹ್ನ ಗಂಟೆ 9.30 ರಿಂದ ಜರುಗಲಿದೆ.
ಕಾರ್ಯಕ್ರಮದಲ್ಲಿ ಸಹಕಾರ ದ್ವಜಾರೋಹಣವನ್ನು ದ. ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ನೆರವೇರಿಸಲಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ,ಮಂಗಳೂರು ದ. ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಅಧ್ಯಕ್ಷ ಸಹಕಾರ ರತ್ನ ಡಾ| ಎಂ .ಎನ್ ರಾಜೇಂದ್ರ ಕುಮಾರ್ ರವರು ಕೇನ್ಯ ಶಾಖೆ ನೂತನ ಕಟ್ಟಡದ ಶಿಲಾನ್ಯಾಸ ಮತ್ತು ಸಮಾರಂಭದ ಉದ್ಘಾಟನೆಯನ್ನು ಮಾಡಲಿರುವರು.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಸಭಾಧ್ಯಕ್ಷತೆ ಮತ್ತು ಸಭಾಭವನದ ಡಿಜಿಟಲ್ ನಾಮಫಲಕ ಹಾಗೂ ಛಾವಣಿಯನ್ನು ಅನಾವರಣ ಗೊಳಿಸಲಿರುವರು.
ಮಂಗಳೂರು ದ. ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟು ಕಾಮನ್ ಸರ್ವಿಸ್ ಸೆಂಟರ್ ನ್ನು ಉದ್ಘಾಟನೆ ಮಾಡಲಿರುವರು. ಸಹಕಾರ ರತ್ನ ಪುರಸ್ಕೃತ ಸಹಕಾರಿ ನಿತ್ಯಾನಂದ ಮುಂಡೋಡಿ ರವರು ಸ್ಥಳ ದಾನಿಗಳು ಹಾಗೂ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಲಿದ್ದಾರೆ. ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಸಂಘದ ಸಂಸ್ಥಾಪಕರಿಗೆ ಗೌರವಾರ್ಪಣೆ ಮಾಡಲಿರುವರು. ದ.ಕ ಸಹಕಾರ ಸಂಘಗಳ ಉಪನಿಬಂಧಕ ಎಚ್ ಎನ್ ರಮೇಶ ಮರಣ ಸಾಂತ್ವನ ನಿಧಿ ಲೋಕಾರ್ಪಣೆ ಮಾಡಲಿರುವರು. ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಶ್ರೀಮತಿ ತ್ರಿವೇಣಿ ರಾವ್ ಕೆ ಬಹುಮಾನ ವಿತರಣೆ ಮಾಡಲಿರುವರು.
ಸಂಘದ ಅಧ್ಯಕ್ಷ ಗಣೇಶ್ ಪೈ, ಉಪಾಧ್ಯಕ್ಷ ಕೆ. ರಘುನಾಥ ರೈ, ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ ಸಿ, ಸುಬ್ರಹ್ಮಣ್ಯ ಕುಳ, ಲಿಗೋಧರ ಆಚಾರ್ಯ,
ಶ್ರೀಕೃಷ್ಣ ಭಟ್ ಪಟೋಳಿ, ವಾಚಣ್ಣ ಕೆರೆಮೂಲೆ,ಚಿನ್ನಪ್ಪ ಗೌಡ ಚೊಟ್ಟೆಮಜಲು,ಕಿಟ್ಟಣ್ಣ ಪೂಜಾರಿ ಕಾಂಜಿ, ಮುದರ ಐವತೊಕ್ಲು, ಶ್ರೀಮತಿ ಮೋಹಿನಿ ಬಿ.ಎಲ್, ಶ್ರೀಮತಿ ಹೇಮಲತಾ ಚಿದ್ಗಲ್ಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಿ ವೇದಿಕೆಯಲ್ಲಿ ಉಪಸ್ಥಿತರಿರುವರು.
ಅಂದು ಅಪರಾಹ್ನ ಗಂಟೆ 2 ರಿಂದ 4 ತನಕ ಕೃಷಿ ವಿಚಾರಗೋಷ್ಠಿ ನಡೆಯಲಿದೆ.ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ ವಹಿಸಲಿದ್ದಾರೆ. ಎಗ್ರಿಕಲ್ಚರ್ ಎಂ. ಎಸ್ಸಿ ( ಆಸ್ಟ್ರೇಲಿಯಾ ) ಪಾರ್ಥಾ ವಾರಣಾಸಿ ರವರು ವಿಚಾರ ಮಂಡನೆ
ಮಾಡಲಿದ್ದಾರೆ. ವಿಷಯ ಅಡಿಕೆಯೊಂದಿಗೆ ಪರ್ಯಾಯ ಬೆಳೆಗಳ ಮೂಲಕ ಕೃಷಿಕರು ಸ್ವಾವಲಂಬಿಗಳಾಗುವ ಬಗೆ.
ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಜಲ ಸಂರಕ್ಷಣೆಯಲ್ಲಿ ಮಳೆ ಕೊಯ್ಲಿನ ವಿಧಾನಗಳು ಎಂಬ ವಿಷಯದಲ್ಲಿ ವಿಚಾರ ಮಂಡನೆ
ಮಾಡಲಿದ್ದಾರೆ.
ಸಂಜೆ ಗಂಟೆ 4 ರಿಂದ 6 ತನಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ ನಾಟ್ಯ ವೈಭವ ಪ್ರದರ್ಶನ ಗೊಳ್ಳಲಿದೆ. ಭಾಗವತರಾಗಿ ರವಿಚಂದ್ರ ಕನ್ನಡಿ ಕಟ್ಟೆ, ಗಿರೀಶ್ ರೈ ಕಕ್ಯೆಪದವು, ಚೆಂಡೆ-ಮದ್ದಲೆ ಚೈತನ್ಯ ಕೃಷ್ಣ ಪದ್ಯಾಣ, ಶ್ರೀಧರ ವಿಟ್ಲ, ಚಕ್ರತಾಳ ಮುರಾರಿ ಭಟ್ ಪಂಜಿಗದ್ದೆ, ಮುಮ್ಮೇಳದಲ್ಲಿ ರಾಕೇಶ್ ರೈ ಅಡ್ಕ,ರಕ್ಷಿತ್ ಶೆಟ್ಟಿ ಪಡ್ರೆ ಪಾಲ್ಗೊಳ್ಳಲಿದ್ದಾರೆ.
ಡಿ.12:ಕ್ವಿಜ್ ಮತ್ತು ಹಗ್ಗ ಜಗ್ಗಾಟ :
ಡಿ.12 ರಂದು ಪೂ.ಗಂಟೆ 10 ರಿಂದ ಸಂಘದ ಸದಸ್ಯರಿಗೆ “ಸಹಕಾರ ಕ್ವಿಜ್ 2023″ ರಸ ಪ್ರಶ್ನೆ. ಸಂಜೆ ಗಂಟೆ 3 ರಿಂದ’ಸಹಕಾರ ಸೌಹಾರ್ದ ಹಗ್ಗ ಜಗ್ಗಾಟ ಸ್ಪರ್ಧೆ” ಸ್ಥಳದಲ್ಲಿಯೇ ತಂಡ ರಚಿಸಿ ಪುರುಷ ಹಾಗೂ ಮಹಿಳಾ ಪ್ರತ್ಯೇಕ ವಿಭಾಗದಲ್ಲಿ ಜರುಗಲಿದೆ.