ಪಂಜ ಲಯನ್ಸ್ ಕ್ಲಬ್ ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮ

0

ವಿವಿಧ ಸೇವಾ ಕಾರ್ಯಗಳು ಲೋಕಾರ್ಪಣೆ

ಪಂಜ ಲಯನ್ಸ್ ಕ್ಲಬ್ ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮ ದ.9ರಂದು ಪಡ್ಪಿನಂಗಡಿ ನಡ್ಕ ಶಿವಗೌರಿ ಕಲಾಮಂದಿರದಲ್ಲಿ ಜರುಗಿತು.

ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿ’ಸೋಜ ರವರು ದೀಪ ಬೆಳಗಿಸಿದರು.
“ಪಂಜ ಲಯನ್ಸ್ ಕ್ಲಬ್ ಫೀಸ್ ಪೋಸ್ಟರ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡಿದೆ. ಉತ್ತಮ ನಾಯಕರಿರುವ ಜಿಲ್ಲೆಯಲ್ಲೂ ಉತ್ತಮ ಸ್ಥಾನದಲ್ಲಿ ಬೆಳೆಯುತ್ತಿರುವ ಕ್ಲಬ್” ಎಂದು ಹೇಳಿದರು.


ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಸಭಾಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕ್ಯಾಬಿನೆಟ್ ಸೆಕ್ರೆಟರಿ ಓಸ್ವಾಲ್ಡ್ ಡಿ’ಸೋಜ,ಜಿಲ್ಲಾ ಲಿಯೋ ಕ್ಲಬ್ ಅಧ್ಯಕ್ಷೆ ಡಾ.ರಂಜಿತಾ ಶೆಟ್ಟಿ ,ಪ್ರಾಂತೀಯ ಅಧ್ಯಕ್ಷೆ ಶ್ರೀಮತಿ ರೇಣುಕಾ ಸದಾನಂದ ಜಾಕೆ , ವಲಯಾಧ್ಯಕ್ಷ ಸಂತೋಷ್ ಜಾಕೆ,ಪಂಜ ಲಯನ್ಸ್ ಕ್ಲಬ್ ನಿಕಟ ಪೂರ್ವಾಧ್ಯಕ್ಷ ಪುರುಷೋತ್ತಮ ದಂಬೆಕೋಡಿ, ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ, ಕೋಶಾಧ್ಯಕ್ಷ ಆನಂದ ಜಳಕದಹೊಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿ’ಸೋಜ ರವರನ್ನು ಸನ್ಮಾನಿಸಲಾಯಿತು. ಈ ವೇಳೆ ಡಾ.ಪ್ರಕಾಶ್ ಡಿ’ಸೋಜ ಉಪಸ್ಥಿತರಿದ್ದರು .
ಸೇವಾ ಕಾರ್ಯಗಳು: ಅವಿನ್ ಕುಮಾರ್ ಕುಳ್ಳಾಜೆ ಯವರಿಗೆ ಪುರುಷೋತ್ತಮ ಮಲ್ಕಜೆ ರವರ ಪ್ರಾಯೋಜಕತ್ವದಲ್ಲಿ ರೂ 5 ಸಾವಿರ ಸಹಾಯ ಧನ , ಕ್ಲಬ್ ನ ಸದಸ್ಯ ಸೀತಾರಾಮ ಗೌಡ ಕುದ್ವ ರವರ ಪ್ರಾಯೋಜಕತ್ವದಲ್ಲಿ ನಾಗತೀರ್ಥ ಶಾಲೆಗೆ 2ಲಕ್ಷ ರೂ ವೆಚ್ಚದಲ್ಲಿ ಟೈಲ್ಸ್ ಅಳವಡಿಕೆ, ಬಾಲಕೃಷ್ಣ ಪುತ್ಯ ರವರ ಪ್ರಾಯೋಜಕತ್ವದಲ್ಲಿ ನಾಗತೀರ್ಥ ಅಂಗನವಾಡಿ ಕೇಂದ್ರಕ್ಕೆ ರೂ.80,000 ವೆಚ್ಚದಲ್ಲಿ ಜಾರುಬಂಡಿ ಮತ್ತು ಉಯ್ಯಾಲೆ ಕೊಡುಗೆ,ಕ್ಲಬ್ ನ ಸದಸ್ಯ ಕೇಶವ ಕುದ್ವ ರವರ ಪ್ರಾಯೋಜಕತ್ವದಲ್ಲಿ ಬಡ ಕುಟುಂಬಕ್ಕೆ ಅಕ್ಕಿ ವಿತರಣೆ,ಕ್ಲಬ್ ನ ಸದಸ್ಯ ತುಕಾರಾಮ ಏನೆಕಲ್ಲು ರವರ ಪ್ರಾಯೋಜಕತ್ವದಲ್ಲಿ ಏನೆಕಲ್ಲಿನಲ್ಲಿ 15 ಸಾವಿರ ರೂ.ವೆಚ್ಚದಲ್ಲಿ ದಾರಿಗಳ ನಾಮಫಲಕ ಅಳವಡಿಕೆ,ಕ್ಲಬ್ ನ ಸದಸ್ಯ ನಾಗೇಶ್ ಕಿನ್ನಿಕುಮೇರಿ ಯವರ ಪ್ರಾಯೋಜಕತ್ವದಲ್ಲಿ ಪಡ್ಪಿನಂಗಡಿ ಶಾಲೆಗೆ 15 ಸಾವಿರ ರೂ ಬೆಲೆಯ ಧ್ವನಿ ವರ್ಧಕ ವಿತರಿಸಲಾಯಿತು. ಇದೇ ವೇಳೆ ಎಲ್ಲಾ ಪ್ರಾಯೋಜಕರನ್ನು ಸನ್ಮಾನಿಸಲಾಯಿತು.

ಹೈ ಜಂಪ್ ಮತ್ತು ರಿಲೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಅವನಿ ಪಳಂಗಾಯ,ಕ್ಯಾನ್ಸರ್ ಪೀಡಿತರಿಗಾಗಿ ಯುವಶಕ್ತಿ ಸಂಸ್ಥೆಗೆ ಕೇಶದಾನಗೈದ ಮಾಯಾ ಆಯನ,
ಪೀಸ್ ಪೋಸ್ಟರಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಅನ್ವಿತ ಮತ್ತು ಅವರಿಗೆ ತರಬೇತಿ ನೀಡಿದ ಚಿತ್ರ ಕಲಾ ಶಿಕ್ಷಕ ಸತೀಶ್ ಪಂಜ ರವರನ್ನು ಗೌರವಿಸಲಾಯಿತು.


ಕ್ಲಬ್ ನ ಸದಸ್ಯ ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ ರವರಿಗೆ ಯಂ.ಜೆ.ಯಫ್ ಫಲಕವನ್ನು ಗವರ್ನರ್ ನೀಡಿ ಗೌರವಿಸಿದರು.

ಉನ್ನತ ಶಿಕ್ಷಣ ಮತ್ತು ಕಲಾ ಸಾಧನೆಗಾಗಿ ಜೀವನ್ ಎ ಜಳಕದಹೊಳೆ,ತನ್ಮಯಿ ಕಿನ್ನಿಕುಮೇರಿ , ಪೂರ್ವಿಕ ಕಿನ್ನಿಕುಮೇರಿ , ಅಧ್ವಿಕ ಕುದ್ವ , ಅಕ್ಷರ ಕುದ್ವ ರವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸುರೇಶ್ ಕುಮಾರ್ ನಡ್ಕ ವೇದಿಕೆಗೆ ಆಹ್ವಾನಿಸಿದರು. ತನ್ಮಯಿ ಕಿನ್ನಿಕುಮೇರಿ ಮತ್ತು ಪೂರ್ವಿಕ ಕಿನ್ನಿಕುಮೇರಿ ರವರಿಂದ ಭರತನಾಟ್ಯ, ಅಧ್ವಿಕ ಕುದ್ವ ಮತ್ತು ಅಕ್ಷರ ಕುದ್ವ ಪ್ರಾರ್ಥಿಸಿದರು.


ಕರುಣಾಕರ ಎಣ್ಣೆಮಜಲು ಲಯನ್ಸ್
ಪ್ರಾರ್ಥನೆ ಮಾಡಿದರು. ಮನು ಯಂ ಧ್ವಜ ವಂದನೆ ಮಾಡಿದರು. ನಾಗೇಶ್ ಕಿನ್ನಿಕುಮೇರಿ ಲಯನ್ಸ್ ನೀತಿ ಸಂಹಿತೆ ಓದಿದರು .ದಿಲೀಪ್ ಬಾಬ್ಲುಬೆಟ್ಟು ಸ್ವಾಗತಿಸಿದರು. ವಾಸುದೇವ ಮೇಲ್ಪಾಡಿ ವರದಿ ವಾಚಿಸಿದರು. ಕುಮಾರಸ್ವಾಮಿ ಕಿನ್ನಿಕುಮೇರಿ ,
ಶಶಿಧರ ಪಳಂಗಾಯ,
ಪುರಂದರ ಪನ್ಯಾಡಿ ಅತಿಥಿಗಳ ಪರಿಚಯ, ಸೇವಾ ಕಾರ್ಯಗಳ ನಿರ್ವಹಣೆಗೆ ಮಾಡಿದರು. ಆನಂದ ಜಳಕದಹೊಳೆ ವಂದಿಸಿದರು.