ಕ್ರೀಡೆಯಲ್ಲಿ ಭಾಗವಹಿಸುವಿಕೆ ಮುಖ್ಯ-ಸೀತಾರಾಮ ರೈ ಜ ವಿದ್ಯಾರಶ್ಮಿಗೆ ರಾಜ್ಯಮಟ್ಟದಲ್ಲಿ ಹೆಸರು- ಮಾಮಚ್ಚನ್
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ `ಕ್ರೀಡಾ ರಶ್ಮಿ’ ದ. ೯ ರಂದು ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಮಾನಸಿಕ, ದೈಹಿಕವಾಗಿ ಆರೋಗ್ಯಪೂರ್ಣವಾಗಿ ಬದುಕಲು ಕ್ರೀಡೆ ಸಹಕಾರಿ ಆಗಲಿದೆ. ಇವತ್ತು ವಿದ್ಯಾಕ್ಷೇತ್ರದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಶಿಕ್ಷಣಕ್ಕೆ ಹೋದ ಬಳಿಕ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುತ್ತಿಲ್ಲ. ಪಾಠದಲ್ಲಿ ತಲ್ಲೀನರಾಗಿ, ಕ್ರೀಡೆಯನ್ನು ದೂರಮಾಡುತ್ತಾರೆ, ನಾನು ತಿಳಿದ ಪ್ರಕಾರ ಕ್ರೀಡೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂಚೂಣಿಗೆ ಬರುತ್ತಾರೆ ಎಂದು ಹೇಳಿದರು
ಸೀತಾರಾಮ ರೈಯವರ ದಕ್ಷ ಆಡಳಿತ- ಮಾಮಚ್ಚನ್: ಕ್ರೀಡಾರಶ್ಮಿಯನ್ನು ಉದ್ಘಾಟನೆಗೈದ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್‍ಯಾಧ್ಯಕ್ಷ ಮಾಮಚ್ಚನ್‌ರವರು ಮಾತನಾಡಿ ಸಹಕಾರ ರತ್ನ ಸವಣೂರು ಸೀತಾರಾಮ ರೈಯವರ ನೇತೃತ್ವದ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆ ರಾಜ್ಯದಲ್ಲಿಯೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಹೆಸರನ್ನು ಪಡೆದಿದೆ. ಶಿಕ್ಷಣ ಕ್ಷೇತ್ರದಲ್ಲಿ ೨೫ ವರ್ಷಗಳಿಂದ ಸೀತಾರಾಮ ರೈಯವರ ದಕ್ಷ ಆಡಳಿತದಲ್ಲಿ ವಿದ್ಯಾರಶ್ಮಿ ವಿದ್ಯಾಲಯ ಕ್ರೀಡಾ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದು, ಇಲ್ಲಿ ಕ್ರೀಡಾ ತರಬೇತಿ ನೀಡುತ್ತಿರುವ, ಮೂರು ಬಾರಿ ಮಂಗಳೂರು ವಿ.ವಿ. ವಾಲಿಬಾಲ್ ತಂಡವನ್ನು ಮುನ್ನಡೆಸಿದ ನಾಯಕ ಈ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ರಾಷ್ಟ್ರೀಯ ಕ್ರೀಡಾಪಟು ಶಿವಪ್ರಸಾದ್ ಆಳ್ವರು ಎಂಬುದು ಉಲ್ಲೇಖನೀಯ ವಿಚಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಸಂಸ್ಥೆಯ ಸಂಚಾಲಕ ಸೀತಾರಾಮ ರೈ, ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಮತ್ತು ಪ್ರಾಂಶುಪಾಲ ಸೀತಾರಾಮ ಕೇವಳ ಹಾಗೂ ಉಪನ್ಯಾಸಕರ ತಂಡ ಸಂಸ್ಥೆಯ ಪ್ರಗತಿಗೆ ನೀಡುತ್ತಿರುವ ಸೇವಾಕಾರ್‍ಯಕ್ಕೆ ನಾವು ಅಭಿನಂದಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಆಶ್ವಿನ್ ಎಲ್.ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾರಾಯಣ ಮೂರ್ತಿ, ವಿದ್ಯಾರಶ್ಮಿ ವಿದ್ಯಾಲಯದ ಟ್ರಸ್ಟಿ ಎನ್. ಸುಂದರ ರೈ ಸವಣೂರು, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಗೌರವ ಉಪಾಧ್ಯಕ್ಷ ರಾಮಪ್ರಸಾದ್ ರೈ ಕಲಾಯಿ, ನಿರ್ದೇಶಕರುಗಳಾದ ಅಬ್ದುಲ್ಲಾ ಸೋಂಪಾಡಿ, ರಪೀಕ್ ಎಂ.ಎ, ಮಾಂತೂರು, ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ್ ಆಳ್ವ, ಸಂಸ್ಥೆಯ ಉಪಪ್ರಾಶಂಪಾಲೆ ಶಶಿಕಲಾ ಎಸ್ ಆಳ್ವ ಹಾಗೂ ಉಪನ್ಯಾಸಕರುಗಳು ಮತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲ ಸೀತಾರಾಮ ಕೇವಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸನಾ ಫಾತಿಮಾ ಕಾರ್‍ಯಕ್ರಮ ನಿರೂಪಿಸಿ, ರೀಫಾ ಫಾತಿಮಾ ವಂದಿಸಿದರು. ಮಾರ್‌ವಾ ಅಬ್ದುಲ್ಲಾರವರು ಪ್ರತಿಜ್ಞಾ ವಿಧಿ ವಿಧಿ ಬೋಧಿಸಿದರು.