ಸುಬ್ರಹ್ಮಣ್ಯ: ಅಕ್ಷಯ ಮೊಬೈಲ್ಸ್ ಶುಭಾರಂಭ

0

ಸುಬ್ರಹ್ಮಣ್ಯದ ಬೈಪಾಸ್ ರೋಡ್ ನ ನಂದಶ್ರೀ ವಾಣಿಜ್ಯ ಸಂಕೀರ್ಣ ದಲ್ಲಿ ಡಿ.7 ರಂದು ಅಕ್ಷಯ ಮೊಬೈಲ್ ಶುಭಾರಂಭಗೊಂಡಿತು.

ಶುಭಾರಂಭ ಪ್ರಯುಕ್ತ ಬೆಳಗ್ಗೆ ಗಣಹವನ ನಡೆಸಲಾಯಿತು.
ಮೊಬೈಲ್ ಅಂಗಡಿಯನ್ನು ವೇಣುಗೋಪಾಲ ಎನ್.ಎಸ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಅತಿಥಿಗಳಾಗಿ ರಾಜೇಶ್ ಎನ್ ಎಸ್, ಲೋಕೇಶ್ ಎನ್ ಎಸ್,
ಗೋಪಾಲ ಎಣ್ಣೆ ಮಜಲು ಗಳಿದ್ದರು. ಸಂಸ್ಥೆಯ ಮಾಲಕರುಗಳಾದ
ರಮಿತ್ ಹೆಡ್ಡನ ಮನೆ ಮತ್ತು ವಿನೋದ್ ಹಾಡಿಕಲ್ಲು ಅಲ್ಲದೆ
ಭುವನೇಶ್ ಕಡಿರ, ಮದನ್ ಕೊಲ್ಯ, ಮನೋಜ್ ಕುಜುಂಬಾರು,
ಸೋಮಶೇಖರ್ ಹೆಡ್ಡನ ಮನೆ
ದಿವ್ಯ ವಿನೋದ್ ಹಾಡಿಕಲ್ಲು ಮತ್ತಿತರರು ಉಪಸ್ಥಿತರಿದ್ದರು. ಅಕ್ಷಯ್ ಮೊಬೈಲ್ಸ್ ನ ಗುತ್ತಿಗಾರು ಮತ್ತು ಕಾಣಿಯೂರು
ಸಹ ಸಂಸ್ಥೆಗಳ ಉದ್ಯೋಗಿಗಳು ಸಹಕರಿಸಿದರು. ಸುಬ್ರಹ್ಮಣ್ಯದ ಅಂಗಡಿಯಲ್ಲಿ ಸ್ಯಾಮ್ಸಂಗ್, ವಿವೋ, ಒಪ್ಪೋ,
ನೋಕಿಯಾ ಮತ್ತಿತರ ಎಲ್ಲಾ ಮೊಬೈಲ್ ಕಂಪನಿಗಳ
ಸ್ಮಾರ್ಟ್ ಫೋನ್ ಮತ್ತು ಮೊಬೈಲ್, ಪೋನ್ ಕವರ್, ಇಯರ್ ಫೋನ್, ಮೆಮೊರಿ ಕಾರ್ಡ್, ಚಾರ್ಜರ್ ಹಾಗೂ ಇನ್ನೀತರ ಸೇವೆಗಳಿಗೆ ಲಭ್ಯ ಇರುವುದಾಗಿ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.