ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ತರ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ಡಿ.12 ರಂದು ಸಂಘದ ಸಭಾಂಗಣದಲ್ಲಿ ಪೂ.ಗಂಟೆ 10 ರಿಂದ ಸಂಘದ ಸದಸ್ಯರಿಗೆ “ಸಹಕಾರ ಕ್ವಿಜ್ 2023″ ರಸ ಪ್ರಶ್ನೆ. ಸಂಜೆ ಗಂಟೆ 3 ರಿಂದ’ ಸಂಘದ ವಠಾರದಲ್ಲಿ ಸಹಕಾರ ಸೌಹಾರ್ದ ಹಗ್ಗ ಜಗ್ಗಾಟ ಸ್ಪರ್ಧೆ” ಸ್ಥಳದಲ್ಲಿಯೇ ತಂಡ ರಚಿಸಿ ಪುರುಷ ಹಾಗೂ ಮಹಿಳಾ ಪ್ರತ್ಯೇಕ ವಿಭಾಗದಲ್ಲಿ ಜರುಗಲಿದೆ.
ಡಿ.16 ಶತಮಾನೋತ್ತರ ದಶಮಾನೋತ್ಸವ ಸಂಭ್ರಮ ವಿವಿಧ ಕಾರ್ಯಕ್ರಮ ಗಳೊಂದಿಗೆ ಜರುಗಲಿದೆ.