ಕುಕ್ಕೆ ಸುಬ್ರಹ್ಮಣ್ಯ : ಲಕ್ಷದೀಪೋತ್ಸವದ ಪ್ರಯುಕ್ತ ನಡೆದ ಕುಣಿತ ಭಜನೆ

0

ಆಡಳಿತ ಮಂಡಳಿ ವ್ಯವಸ್ಥೆಗೆ ಭಜಕರ ಪ್ರಶಂಸೆ – ಭೋಜನಾಲಯದಲ್ಲಿ ಮಾತ್ರ ನೂಕುನುಗ್ಗಲು

ಕುಕ್ಕೆಸುಬ್ರಹ್ಮಣದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ಕುಣಿತ ಭಜನೆ ಏರ್ಪಡಿಸಲಾಗಿತ್ತು.‌ ದೇವಸ್ಥಾನದ ಆಡಳಿತ ಮಂಡಳಿ ಕುಣಿತ ಭಜನೆಯಲ್ಲಿ‌ ಪಾಲ್ಗೊಳ್ಳುವ ತಂಡಗಳಿಗೆ ಅತ್ಯಂತ ಸುಸಜ್ಜಿತ ವ್ಯವಸ್ಥೆ ಮಾಡಿತ್ತು.


ಸುಮಾರು 150ಕ್ಕೂ ಹೆಚ್ಚು ಕುಣಿತ ಭಜನಾ ತಂಡಗಳು, 2000ಕ್ಕೂ ಹೆಚ್ಚು ಭಜನಾ ಮಂಡಳಿಯ ಸದಸ್ಯರಿಗೆ ಯಾವುದೇ ಗೊಂದಲಗಳು ಏರ್ಪಡದ ರೀತಿ ವ್ಯವಸ್ಥೆ ಮಾಡಿದ್ದರು. ಕುಣಿತ ಭಜನೆ ಆರಂಭವಾಗಿ ಸ್ವಲ್ಪ ಹೊತ್ತಲ್ಲೇ ಜೋರಾಗಿ ಮಳೆ ಸುರಿಯಲಾರಂಭಿಸಿತು. ಯುವಕ ಯುವತಿಯರು, ಪುಟಾಣಿ ಮಕ್ಕಳು, ಶಾಲಾ ಮಕ್ಕಳು, ಹಿರಿಯ‌ ಭಜಕರು ಹೀಗೆ ಎಲ್ಲಾ ವಯೋಮಾನದವರು ಮಳೆಯನ್ನು ಲೆಕ್ಕಿಸದೆ ದೇವರ ಸಂಕೀರ್ತನೆಗೆ ಒದ್ದೆಯಾಗುತ್ತಲೇ ಹೆಜ್ಜೆ ಹಾಕಿದರು.

ಕುಣಿತ ಭಜನೆ ಮುಗಿಯುತ್ತಿದ್ದಂತೆ ಮಳೆಯೂ ದೂರವಾಯಿತು. ಬಳಿಕ ಆದಿ ಸುಬ್ರಹ್ಮಣ್ಯ ಬಳಿಯ ಭೋಜನಾಲಾಯದಲ್ಲಿ‌ ಭಜನಾ ತಂಡದ ಸದಸ್ಯರಿಗೆ ಭೋಜನದ ವ್ಯವಸ್ಥೆ ಮಾಡಿದ್ದರು. ಆದರೆ ಅಲ್ಲಿ ಮಾತ್ರ ಒಂದೇ ಕಡೆ ಊಟದ ಕೌಂಟರ್ ಮಾಡಿದ ಕಾರಣ ನೂಕುನುಗ್ಗಲು ಉಂಟಾಯಿತು. ಇದರಿಂದಾಗಿ ಸಣ್ಣ ಪುಟ್ಟ ಮಕ್ಕಳು ಸೇರಿದಂತೆ ಭಜಕರು ಊಟಕ್ಕಾಗಿ ಕಷ್ಟ ಪಡಬೇಕಾಯಿತು. ಎಲ್ಲರು ಒದ್ದೆಯಾದ ಕಾರಣ ಬೋಜನಲಾಯದ ನೆಲ ಒದ್ದೆಯಾಗತೊಡಗಿತು. ಊಟದ ಕೌಂಟರ್ ಬಳಿ‌ ತಲ್ಲಾಟಗಳು ನಡೆಯತೊಡಗಿತು. ಒಬ್ಬರು ಊಟದ ತಟ್ಟೆ ಸಮೇತ ಬಿದ್ದು ಗಾಯಗೊಂಡ ಘಟನೆಯು ನಡೆಯಿತು. ಭೋಜನಲಾಯದಲ್ಲಿ ವಿಶಾಲ ಸ್ಥಳವಕಾಶವಿದ್ದರೂ, ಆಡಳಿತ ಮಂಡಳಿ ಪ್ರತ್ಯೇಕ ವ್ಯವಸ್ಥೆ ಮಾಡಿದ್ದರೂ ಬೋಜನಾಲಯದ ಒಳಗೆ ಪ್ರತ್ಯೇಕ ಎರಡು ಮೂರು ಕೌಂಟರ್ ಮಾಡುತ್ತಿದ್ದರೆ ನೂಕುನುಗ್ಗಲು ಆಗುತ್ತಿರಲಿಲ್ಲವೆಂದು ಅಲ್ಲದ್ದವರು ಮಾತಾಡಿಕೊಳ್ಳುತ್ತಿದ್ದರು. ಉಳಿದಂತೆ ಎಲ್ಲಾ ವ್ಯವಸ್ಥೆ ಗಳು ಅಚ್ಚುಕಟ್ಟಾಗುತ್ತು. ಸಂಜೆ ವೇಳೆ ಬಂದ ಭಜನಾ ತಂಡಗಳಿಗೆ ದೇವಸ್ಥಾನದ ಬಳಿಯ ಭೋಜನಾಲಯದಲ್ಲಿ ವ್ಯವಸ್ಥಿತವಾದ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ರಥಬೀದಿಯಲ್ಲಿ ಕುಣಿತ ಭಜನೆ ಮಾಡಲು ಸರ್ಕಲ್ ನಿರ್ಮಿಸಿ ನಂಬರ್ ನೀಡಲಾಗಿತ್ತು. ಅದೇ ನಂಬರ್ ನ್ನು ಭಜನಾ ತಂಡಗಳಿಗೆ ಮೊದಲೇ ನೀಡಿದ ಕಾರಣ ಒಂದಿನಿತು ಗೊಂದಲಗಳು ಏರ್ಪಡದ ರೀತಿಯಲ್ಲಿ ಸಮಯಕ್ಕೆ ಸರಿಯಾಗಿ ಭಜನಾ ತಂಡಗಳು ಪಾಲ್ಗೊಳ್ಳುವಂತಾಯಿತು. ಪಾಲ್ಗೊಂಡ ತಂಡದ ಪ್ರತಿ ಸದಸ್ಯರಿಗೆ ಶಾಲು, ಪ್ರಸಾದ, ದೇವರ ಫೋಟೊ ನೀಡಲಾಗಿತ್ತು. ತಂಡಗಳು ತಲುಪುವ ಮೊದಲೇ ಎಣ್ಣೆ, ದೀಪ, ಹೂ, ದೀಪ ಇಡಲು ಸ್ಟ್ಯಾಂಡ್ ಇರಿಸಲಾಗಿತ್ತು. ದೀಪವನ್ನು ತಂಡದ ಸದಸ್ಯರೇ ಉರಿಸಲು ಅನುವು ಮಾಡಿಕೊಟ್ಟಿರುವುದು ವಿಶೇಷವಾಗಿತ್ತು. ಈ ಬಾರಿಯ ಅಚ್ಚುಕಟ್ಟಾದ ವ್ಯವಸ್ಥೆಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿತ್ತು.