ಪಂಜ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಚುನಾವಣೆ

0


🔷ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯ

🔷 13 ಸ್ಥಾನಕ್ಕೆ – 12 ನಾಮಪತ್ರ ಸಲ್ಲಿಕೆ

ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರುಗಳ ಆಯ್ಕೆಗೆ ಚುನಾವಣೆಗೆ ಡಿ.8ರಿಂದ ನಾಮಪತ್ರಗಳ ಸಲ್ಲಿಕೆ ಡಿ.12 ಕೊನೆ ಗೊಂಡಿದೆ. ಒಟ್ಟು 13 ಸ್ಥಾನವಿದ್ದು. ಕೇವಲ 12 ನಾಮಪತ್ರ ಸಲ್ಲಿಕೆಯಾಗಿದೆ.

ಇಲ್ಲಿ ಒಟ್ಟು 13 ಮಂದಿ ನಿರ್ದೇಶಕರುಗಳ ಆಯ್ಕೆಯಾಗಬೇಕಿದ್ದು, ಏಳು ಮಂದಿ ಸಾಮಾನ್ಯ ಸ್ಥಾನದಿಂದ, ತಲಾ ಒಬ್ಬರು ಪ.ಜಾತಿ ಮೀಸಲು ಸ್ಥಾನ, ಪ.ಪಂಗಡ ಮೀಸಲು ಸ್ಥಾನ, ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನ ಹಾಗೂ ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನದಿಂದ ಹಾಗೂ ಎರಡು ಮಂದಿ ಮಹಿಳಾ ಮೀಸಲು ಸ್ಥಾನದಿಂದ ನಿರ್ದೇಶಕರುಗಳ ಆಯ್ಕೆಯಾಗ ಬೇಕಾಗಿದೆ. ಇವುಗಳಲ್ಲಿ ಪ.ಜಾತಿ ಮೀಸಲು ಸ್ಥಾನಕ್ಕೆ ಅರ್ಹ ಸದಸ್ಯರಿಲ್ಲದೆ ನಾಮಪತ್ರ ಸಲ್ಲಿಕೆ ಆಗಿಲ್ಲ.


ನಾಮಪತ್ರ ಸಲ್ಲಿಸಿದವರು:


ಸಾಮಾನ್ಯ ಸ್ಥಾನದಿಂದ ನಾರಾಯಣ ನಾಯ್ಕ,ಉದಯ ಬಿ, ಮೋನಪ್ಪ ಕೆ, ಗಣೇಶ್ , ಪೆರ್ಗಡೆ ಕೆ, ಮೋನಪ್ಪ, ಜಯಂತ
ಪ.ಪಂಗಡ ಮೀಸಲು ಸ್ಥಾನಕ್ಕೆ ಪದ್ಮಯ್ಯ ನಾಯ್ಕ, ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನಕ್ಕೆ ಭಾಸ್ಕರ್ ನಾಯಕ್, ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನಕ್ಕೆ ಚನಿಯಪ್ಪ ಗೌಡ, ಮಂದಿ ಮಹಿಳಾ ಮೀಸಲು ಸ್ಥಾನಕ್ಕೆ ಶ್ರೀಮತಿ ಲಕ್ಷ್ಮೀ ಯನ್, ಶ್ರೀಮತಿ ಯಶೋದ ರವರು
ನಾಮಪತ್ರ ಸಲ್ಲಿಸಿದ್ದಾರೆ.

ಡಿ.13ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅಂದೇ ರಿಟರ್ನಿಂಗ್ ಅಧಿಕಾರಿಯವರಿಂದ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳಲಿದ್ದು, ಡಿ.14 ಅಭ್ಯರ್ಥಿಗಳಿಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.