ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಹಯೋಗ
ತೋಡಗಾರಿಕೆ ಇಲಾಖೆ ಸುಳ್ಯ ಇದರ ವತಿಯಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಮಡಪ್ಪಾಡಿ ಇದರ ಸಹಯೋಗದೊಂದಿಗೆ ಅಡಿಕೆ ಮತ್ತು ಅಡಿಕೆಯಲ್ಲಿ ಪರ್ಯಾಯ ಕೃಷಿ ಬಗ್ಗೆ ಮಾಹಿತಿ ಮತ್ತು ತರಬೇತಿ ಕಾರ್ಯಗಾರವು ಡಿ.12ರಂದು ಯುವಕ ಮಂಡಲದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಉಷಾ ಜಯರಾಮ ವಹಿಸಿದ್ದರು.
ಮಡಪ್ಪಾಡಿ ಸೊಸೈಟಿ ಉಪಾಧ್ಯಕ್ಷ ಮಿತ್ರದೇವ ಮಡಪ್ಪಾಡಿ ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ಸ್ವಾಗತಿಸಿದರು.
ತೋಟಗಾರಿಕೆ ಇಲಾಖೆ ಮಂಗಳೂರು ಇದರ ಉಪ ನಿರ್ದೇಶಕ ಹೆಚ್.ಆರ್. ನಾಯಕ್, ರೈತ ಉತ್ಪಾದಕ ಕಂಪೆನಿ ಸುಳ್ಯ ಇದರ ಅಧ್ಯಕ್ಷ ವೀರಪ್ಪ ಗೌಡ ಮುಖ್ಯ ಅತಿಥಿಗಳಾಗಿದ್ದರು.
ವಿಟ್ಲ ಸಿ.ಪಿ.ಸಿ.ಆರ್.ಐ.ಯ ಅಡಿಕೆ ಬೆಳೆ ಸಂಶೋಧನಾ ವಿಜ್ಞಾನಿ ಡಾ.ಭವಿಷ್, ಕೆವಿಕೆ ಮಂಗಳೂರು ಇಲ್ಲಿಯ ವಿಜ್ಞಾನಿ ಡಾ. ರಶ್ಮಿ ಆರ್., ಪ್ರಗತಿಪರ ರಂಬೂಟನ್ ಕೃಷಿಕ ಚೇತನ್ ಕುಮಾರ್ ಶೆಟ್ಟಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.
ಸೊಸೈಟಿ ನಿರ್ದೇಶಕ ಸೋಮಶೇಖರ ಕೇವಳ ವಂದಿಸಿದರು.