ಚೊಕ್ಕಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅದ್ಯಕ್ಷ- ಉಪಾಧ್ಯಕ್ಷತೆಗೆ ಚುನಾವಣೆ

0

ಪಾರ್ವತಿ ನೇಣಾರು ಅಧ್ಯಕ್ಷರಾಗಿ ಪುನರಾಯ್ಕೆ, ಉಪಾಧ್ಯಕ್ಷೆ- ಶೋಭಾ ಕೆ. ನಾಯ್ಕ್

ಅಮರಪಡ್ನೂರು ಗ್ರಾಮದ ಚೊಕ್ಕಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 12 ಮಂದಿ ನಿರ್ದೇಶಕರು‌ ಅವಿರೋಧವಾಗಿ ಆಯ್ಕೆಯಾಗಿದ್ದರು.

ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ 12 ಮಂದಿ ನಾಮಪತ್ರ ಸಲ್ಲಿಸಿದ್ದರು. ಬಳಿಕ ಚುನಾವಣಾಧಿಕಾರಿಗಳು
ನಾಮಪತ್ರ ಪರಿಶೀಲನೆ ನಡೆಸಿ ಡಿ.3 ರಂದು ನಾಮಪತ್ರ ಹಿಂತೆಗೆತಕ್ಕೆ ಅವಕಾಶ ನೀಡಿದ್ದರು.
ಯಾವುದೇ ನಾಮಪತ್ರ ಹಿಂತೆಗೆತವಾಗದ ಹಿನ್ನೆಲೆಯಲ್ಲಿ 12 ಮಂದಿ ನಿರ್ದೇಶಕರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು.

ಡಿ. 11 ರಂದು ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಇಬ್ಬರು ನಿರ್ದೇಶಕರು ಅಧ್ಯಕ್ಷತೆಗೆ ಆಕಾಂಕ್ಷಿಗಳಾಗಿದ್ದು ಸಾಮಾನ್ಯ ಸ್ಥಾನದಿಂದ ಪಾರ್ವತಿ ನೇಣಾರು ಮತ್ತು ನಂದಿನಿ ಚೆನ್ನಮಲೆ ಯವರು ನಾಮಪತ್ರ ಸಲ್ಲಿಸಿದ್ದರು.


ಉಪಾಧ್ಯಕ್ಷತೆಗೆ ಶೋಭಾ ಕೆ ನಾಯ್ಕ್ ಮತ್ತು ಅಂಕಿತಾ ಕೆ.ಎಸ್ ರವರು ನಾಮಪತ್ರ ಸಲ್ಲಿಸಿದ್ದರು.
ಎರಡು ಸ್ಥಾನಗಳಿಗೆ ಇಬ್ಬರಿಬ್ಬರು ಆಕಾಂಕ್ಷಿಗಳಾಗಿದ್ದುದರಿಂದ ಚುನಾವಣೆ ನಡೆಸಬೇಕಾಯಿತು.
ಚುನಾವಣೆಯಲ್ಲಿ ಅಧ್ಯಕ್ಷತೆಗೆ ಇಬ್ಬರಿಗೂ ಸಮಬಲ ತಲಾ 6 ರಂತೆ ಬೆಂಬಲ ಮತಗಳು ಲಭಿಸಿತು. ಸಮಬಲದ ಫಲಿತಾಂಶ ಬಂದಿರುವುದರಿಂದ ನಿಯಮದಂತೆ
ಚೀಟಿ ಎತ್ತಿ ಆಯ್ಕೆ ಪ್ರಕ್ರಿಯೆಯಲ್ಲಿ
ಪಾರ್ವತಿ ನೇಣಾರು ರವರಿಗೆ ಅದೃಷ್ಟ ಒಲಿದು ಮುಂದಿನ ಅವಧಿಗೆ ಅಧ್ಯಕ್ಷೆಯಾಗಿ ಪುನರಾಯ್ಕೆಗೊಂಡರು.


ಉಪಾಧ್ಯಕ್ಷತೆಗೆ ಶೋಭಾ ಕೆ ನಾಯ್ಕ್ ಹಾಗೂ ಅಂಕಿತಾ ರವರು ಸ್ಪರ್ಧಿಸಿದ್ದರು. ಶೋಭಾ ರವರು 7 ಮತಗಳನ್ನು ಪಡೆದರೆ ಅಂಕಿತಾ ರವರು 5 ಮತಗಳನ್ನು ಪಡೆದರು. ಬಹುಮತ ಸಾಬೀತುಗೊಂಡು ನೂತನಉಪಾಧ್ಯಕ್ಷರಾಗಿ ಶೋಭಾ ಕೆ.ನಾಯ್ಕ್ ರವರು ಆಯ್ಕೆಗೊಂಡರು.


ಸಂಘದ ಆಡಳಿತ ಮಂಡಳಿಯ
ನಿರ್ದೇಶಕರಾಗಿ ಭವ್ಯ.ಕೊರತ್ಯಡ್ಕ, ಪಿ.ಎಂ.ಪ್ರೇಮ, ಚಿತ್ರಕಲಾ ಕೆ, ಪ್ರಸನ್ನ ಕುಮಾರಿ, ಶಶಿಕಲಾ ಪಿ, ನಂದಿನಿ ಚೆನ್ನಮಲೆ, ಪೂರ್ಣಿಮಾ ಎ.ವೈ, ಕುಸುಮಾವತಿ ಕುಬಲಾಡಿ, ಅಂಕಿತಾ ಕೆ.ಎಸ್ ಕೊಪ್ಪತ್ತಡ್ಕ,
ಮೀನಾಕ್ಷಿ ಕಾಯರ ರವರು ಆಯ್ಕೆಯಾಗಿರುತ್ತಾರೆ.
ಚುನಾವಣಾಧಿಕಾರಿ ಶಿವಲಿಂಗಯ್ಯ ಎಂ. ರವರು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಸಂಘದ ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳು ಸಹಕರಿಸಿದರು.