ಡಿ.17ರಂದು ಸುಳ್ಯ ತಾಲೂಕು ಯಾದವ ಕ್ರೀಡಾಕೂಟ -2023

0

ಕರ್ನಾಟಕ ಯಾದವ ಸಭಾ ಕೇಂದ್ರ ಸಮಿತಿ ಮಂಗಳೂರು ಇದರ ಸುಳ್ಯ ತಾಲೂಕು ಸಮಿತಿಯ ಆಶ್ರಯದಲ್ಲಿ ಯಾದವ ಕ್ರೀಡಾಕೂಟವು ಸುಳ್ಯದ ಸ.ಪ.ಪೂ.ಕಾಲೇಜಿನ ಯುವಜನ ಸಂಯುಕ್ತ ಮಂಡಳಿ ಕಟ್ಟಡದ ಬಳಿಯ ಕ್ರೀಡಾಂಗಣದಲ್ಲಿ ಡಿ.17ರಂದು ಜರುಗಲಿದೆ.

ಕ್ರೀಡಾಕೂಟವನ್ನು ಯಾದವ ಸಂಘದ ಹಿರಿಯರು ಉದ್ಘಾಟಿಸಲಿದ್ದು, ಅಂಗನವಾಡಿ ಮತ್ತು ನರ್ಸರಿ ಮಕ್ಕಳಿಗೆ ಕಾಳು ಹೆಕ್ಕುವುದು ಬಕೆಟಿಗೆ ಬಾಲ್ ಹಾಕುವುದು , ಕಪ್ಪೆ ಓಟ, 1ರಿಂದ 4ನೇ ತರಗತಿಯ ಮಕ್ಕಳಿಗೆ 50 ಮೀ. ಓಟ, ಬಕೆಟಿಗೆ ಬಾಲ್ ಹಾಕುವುದು, ಬಾಲ್ ಪಾಸಿಂಗ್, ಒಂಟಿಕಾಲು ಓಟ, ಲಕ್ಕೀಗೇಮ್, 5ರಿಂದ 7ನೇ ತರಗತಿಯ ಮಕ್ಕಳಿಗೆ 100 ಮೀ. ಓಟ, ಕಾಲಿಗೆ ಬಲೂನ್ ಕಟ್ಟಿ ಒಡೆಯುವುದು, ಲಕ್ಕೀಗೇಮ್, ವಿಕೆಟಿಗೆ ಬಾಲ್ ಎಸೆತ, ಬಾಲ್ ಪಾಸ್ , ಸೀಮಿತ ಓವರುಗಳ ಕ್ರಿಕೆಟ್ ಪಂದ್ಯಾಟ, 8ರಿಂದ 10ನೇ ತರಗತಿ ಮಕ್ಕಳಿಗೆ 100 ಮೀ. ಓಟ, ನಿಂಬೆ ಚಮಚ ಓಟ, ಗುಂಡೆಸೆತ, ಲಕ್ಕೀಗೇಮ್, ಮೂರು ಕಾಲಿನ ಓಟ, ಪಿಯುಸಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ 200 ಮೀ‌. ಓಟ, ನಿಂಬೆ ಚಮಚ ಓಟ, ಗುಂಡೆಸೆತ, ಮೂರು ಕಾಲಿನ ಓಟ, ಪುರುಷರಿಗೆ ಬುಗರಿ ಓಟ, ಗುಂಡೆಸೆತ, ಲಕ್ಕೀಗೇಮ್, ಕ್ರಿಕೆಟ್, ಹಗ್ಗಜಗ್ಗಾಟ, ಮಹಿಳೆಯರಿಗೆ ಕಾಳು ಹೆಕ್ಕುವುದು, ಗುಂಡೆಸೆತ, ಲಕ್ಕೀಗೇಮ್, ಹಗ್ಗಜಗ್ಗಾಟ, 60 ವರ್ಷ ಮೇಲ್ಪಟ್ಟ ಹಿರಿಯರಿಗೆ ವೇಗನಡಿಗೆ, ಲಕ್ಕೀಗೇಮ್, ಸೇರಿದಂತೆ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಲಿದೆ.

ಸುಳ್ಯ ತಾಲೂಕು ಯಾದವ ಸಮಾವೇಶವು ಡಿ.25ರಂದು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ಜರುಗಲಿದ್ದು, ಅಲ್ಲಿ ಕ್ರೀಡಾಕೂಟದ ವಿಜೇತರುಗಳಿಗೆ ಬಹುಮಾನ ವಿತರಣೆ ನಡೆಯಲಿದೆ.