ದೊಡ್ಡತೋಟ – ಮರ್ಕಂಜ ರಸ್ತೆಯ ಕೊರತ್ತೋಡಿ ಪರಿಸರದಲ್ಲಿ ನಿನ್ನೆ ರಾತ್ರಿ ಕಾಣಸಿಕ್ಕಿದ ಚಿರತೆ ಇಂದು ಬೆಳಿಗ್ಗೆ ಬೊಳ್ಳಾಜೆ ಪರಸರದಲ್ಲಿ ಕಾಣಸಿಕ್ಕಿದೆ.
ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಬೊಳ್ಳಾಜೆ ಸತ್ಯೇಶ್ ಚಂದ್ರೋಡಿ ಯವರ ಮನೆಯ ಅಂಗಳದಲ್ಲಿ ಇಂದು ಮುಂಜಾನೆ ಚಿರತೆ ಕಾಣಸಿಕ್ಕಿದೆ.
ಸತ್ಯೇಶ್ ಚಂದ್ರೋಡಿಯವರ ಮನೆಯ ಪಕ್ಕದಲ್ಲಿಯೇ ಅವರ ಹಳೆಯ ಮನೆಯಿದೆ. ಅಲ್ಲಿ ಟ್ಯಾಪಿಂಗ್ ಕಾರ್ಮಿಕರು ವಾಸ್ತವ್ಯದಲ್ಲಿದ್ದಾರೆ. ಅವರು ಬೆಳಿಗ್ಗೆ ಎದ್ದು ಹೊರಗೆ ಬಂದಾಗ ಅಂಗಳದಲ್ಲಿ ದೊಡ್ಡ ಗಾತ್ರದ ಚಿರತೆ ಕಾಣಸಿಕ್ಕಿದೆ. ಬಳಿಕ ಅದು ಅಲ್ಲಿಂದ ಅವರ ತೋಟಕ್ಕೆ ಇಳಿದಿದೆ. ಅಲ್ಲಿಯ ಪಕ್ಕದ ತೋಟದಲ್ಲಿ ಕೊಕ್ಕರೆಯನ್ನು ಭೇಟೆಯಾಡಿದ ಕುರುಹು ಪತ್ತೆಯಾಗಿದೆ. ಆ ಬಳಿಕ ಯಾವ ಕಡೆ ಹೋಗಿದೆ ಎಂದು ಕಂಡು ಬಂದಿಲ್ಲ.
ಇದೀಗ ಜನವಸತಿ ಪ್ರದೇಶದಲ್ಲಿ ಚಿರತೆ ಕಂಡು ಬಂದಿರುವುದರಿಂದ ಕೃಷಿಕರಲ್ಲಿ ಮತ್ತಷ್ಟು ಆತಂಕ ಹುಟ್ಟಿಸಿದೆ.
ಇಂದು ಬೆಳಿಗ್ಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಚಿರತೆಯ ಚಲನಾವಲನ ಗಮನಿಸಲು ಸಿಸಿ ಕ್ಯಾಮರ ಅಳವಡಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.