ಯೋಜನೆಯ ಸಮರ್ಪಣೆ ಹಾಗೂ ಉದ್ಘಾಟನಾ ಕಾರ್ಯಕ್ರಮ
ಸುಳ್ಯದ ರೋಟರಿ ಕ್ಲಬ್ ವತಿಯಿಂದ 2023-24 ನೇ ಸಾಲಿನ ರೋಟರಿ ಸಮಾಜ ಸೇವೆ ಅಡಿಯಲ್ಲಿ ಶ್ರೀ ಚೆನ್ನಕೇಶವ ದೇವಸ್ಥಾನದ ಸಂಪರ್ಕ ರಸ್ತೆಗೆ ಇಂಟರ್ ಲಾಕ್ ಅಳವಡಿಕೆ ಯೋಜನೆಯ ಸಮರ್ಪಣೆ ಮತ್ತು ಉದ್ಘಾಟನಾ ಸಮಾರಂಭವು ಡಿ.21 ರಂದು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ ವಹಿಸಿದ್ದರು.
ಕಾರ್ಯಕ್ರಮವನ್ನು ರೋಟರಿ ಜಿಲ್ಲೆ 3181 ನಿಕಟಪೂರ್ವ ಜಿಲ್ಲಾ ಗವರ್ನರ್ ರೋ. ಮೇಜರ್ ಡೋನರ್ ಪ್ರಕಾಶ್ ಕಾರಂತ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮತ್ತು ಅಕಾಡೆಮಿ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ ಚಿದಾನಂದ ಭಾಗವಹಿಸಿ ಮಾತನಾಡಿದರು. ವೇದಿಕೆಯಲ್ಲಿ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ, ಯೋಜನಾ ಅಧ್ಯಕ್ಷರಾದ ರೋ.ಮೇಜರ್ ಡೋನರ್ ರಾಮಚಂದ್ರ ಭಟ್, ಯೋಜನಾ ನಿರ್ದೇಶಕರಾದ ರೋ.ಮೀನಾಕ್ಷಿ ಗೌಡ, ನ.ಪಂ.ಸದಸ್ಯೆ ಶ್ರೀಮತಿ ರೇಖಾ ಕಿಶೋರಿ ಶೇಟ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸೀತಾರಾಮ ರೈ ಸವಣೂರು, ಗಣೇಶ್ ಭಟ್, ಕೃಪಾಶಂಕರ್ ತುದಿಯಡ್ಕ, ಗಿರಿಜಾಶಂಕರ್ ತುದಿಯಡ್ಕ, ಜಯಪ್ರಕಾಶ್ ರೈ, ಲಿಂಗಪ್ಪ ಗೌಡ ಕೇರ್ಪಳ, ಸುಧಾಕರ ಕಾಮತ್, ಚಂದ್ರಶೇಖರ ಪೇರಾಲು, ಬಾಲಕೃಷ್ಣ ಎಸ್.ಬಿ.ಲ್ಯಾಬ್, ಕಸ್ತೂರಿಶಂಕರ್, ಪ್ರಭಾಕರ ನಾಯರ್ ಸ್ವಾಗತ್, ಡಾ.ಕೇಶವ ಪಿ.ಕೆ, ಶ್ರೀಮತಿ ಲತಾ ಮಧುಸೂಧನ್, ಪ್ರಭಾಕರ್ ನಾಯರ್ ಮಧುವನ, ಪ್ರೀತಮ್ ಅಕ್ಷತಾ ಟ್ರೇಡರ್, ಪಿ.ಬಿ ಸುಧಾಕರ ರೈ, ಜಗದೀಶ್.ಎ.ಎಸ್, ದಯಾನಂದ ಆಳ್ವ, ಡಾ.ಸುಧಾಕರ ಭಟ್, ಡಾ.ಶ್ರೀ ಕೃಷ್ಣ ಭಟ್, ಮೊದಲಾದವರು ಉಪಸ್ಥಿತರಿದ್ದರು.