ಹಿಕ್ಮಾಫೆಸ್ಟ್ ಮತ್ತು ಪ್ರತಿಭಾ ಪುರಸ್ಕಾರ
ಶಿಕ್ಷಣ ಮಾನವನ ಜೀವನ ರೀತಿಯ ಅದ್ಭುತ ಪ್ರಯೋಗ : ಬಿಇಓ ರಮೇಶ್
ದಾರುಲ್ ಹಿಕ್ಮಾ ಎಜುಕೇಶನಲ್ ಟ್ರಸ್ಟ್
ಪ್ರವರ್ತಿತ ದಾರುಲ್ ಹಿಕ್ಮಾ ಆಂಗ್ಲ ಮಾಧ್ಯಮ ಶಾಲೆ ಬೆಳ್ಳಾರೆ ಇದರ ವಾರ್ಷಿಕೋತ್ಸವದ ಅಂಗವಾಗಿ” ಹಿಕ್ಮಾ ಫೆಸ್ಟ್ ” ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಂದು ಬೆಳ್ಳಾರೆ ಶಾಲಾ ಶಾಲಾ ಆವರಣದಲ್ಲಿ ಜರಗಿತು
ಅಧ್ಯಕ್ಷತೆಯನ್ನು ಟ್ರಸ್ಟ್ ಉಪಾಧ್ಯಕ್ಷ ಉದ್ಯಮಿ ಮಹಮೂದ್ ಶಾಹಿನ್ ಮಾಲ್ ಬೆಳ್ಳಾರೆ ವಹಿಸಿದ್ದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಇ. ರಮೇಶ್ ಮಾತನಾಡಿ ಶಿಕ್ಷಣ ಕೇವಲ ಶಾಲಾ ತರಗತಿಯ ಡಿಗ್ರಿಗಳಲ್ಲ ಬದಲಾಗಿ ಮನುಷ್ಯನನ್ನು ಪರಿಪೂರ್ಣ ಜೀವನ ಕ್ರಮದ ಮೂಲಕ ಎತ್ತರಕ್ಕೆ ಏರಿಸಬಲ್ಲ ಸಾಧನವಾಗಿದೆ, ಶಿಕ್ಷಣ ಪಡೆದಾಗ ರಾಷ್ಟ್ರ ಸದೃಢವಾಗುತ್ತದೆ ಎಂದರು
ಕಲಿಕೆ, ಪಠ್ಯ, ಕ್ರೀಡೆ, ವಿವಿದ ರಾಜ್ಯ ಮಟ್ಟದ ಸ್ಪರ್ಧೆ ಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಲಯನ್ ಮಾಜಿ ರಾಜ್ಯಪಾಲ ಎಂ. ಬಿ. ಸದಾಶಿವ ಮಾತನಾಡಿ ವಿದ್ಯಾರ್ಥಿಗಳಿಗೆ ಇಂದಿನ ಕಾಲಘಟ್ಟದ ಅಭಿರುಚಿಯ ಸಾದಕ ಬಾದಕಗಳ ಬಗ್ಗೆ ವಿವರಿಸಿದರು
ಮುಖ್ಯ ಅತಿಥಿಗಳಾಗಿ ಮೀಫ್ ಉಪಾಧ್ಯಕ್ಷ ಕೆ. ಎಂ. ಮುಸ್ತಫ, ಕೆಯೂ ರ್ ಕೆಪಿಎಸ್ ಪ್ರಿನ್ಸಿಪಾಲ್ ಇಸ್ಮಾಯಿಲ್. ಪಿ. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಲೈಮಾನ್ ಇಂದ್ರಾಜೆ ಭಾಗವಹಿಸಿದ್ದರು
ವೇದಿಕೆಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ಹಮೀದ್ ಆಲ್ಫ್, ಖಜಾಂಚಿ ಮುಸ್ತಫ ಎಂ ಮೊದಲಾದವರು ಉಪಸ್ಥಿತರಿದ್ದರು
ಶಾಲಾ ಮುಖ್ಯ ಶಿಕ್ಷಕಿ ಸಾಬಿದ ಸ್ವಾಗತಿಸಿ
ಶಿಕ್ಷಕಿ ವಾರ್ಷಿಕ ವರದಿ ವಾಚಿಸಿ ಸಾಧನೆಗಳನ್ನು ವಿವರಿಸಿದರು
ಪ್ರಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳಾದ ಅಬ್ದುಲ್ ಖಾದ್ರಿಲ್ ಅವುಫ್ ಪ್ರಾರ್ಥನೆ ನೆರವೇರಿಸಿದರು, ಶಿಕ್ಷಕಿ ಶಾಹೀನ ವಂದಿಸಿ, ಶಿಕ್ಷಕಿ ಚಿತ್ರಾಕ್ಷಿ ಕಾರ್ಯಕ್ರಮ ನಿರೂಪಿಸಿದರು
ಸಮಾರಂಭದ ನಂತರ ಸಂಜೆಯವರೆಗೆ ವೈವಿಧ್ಯಮಯ ಸಾoಸ್ಕೃತಿಕ ಕಾರ್ಯಕ್ರಮ ಜರಗಿತು,