ಎಂ ಸಿ ಸಿ ಕ್ರಿಕೆಟ್ ಟ್ರೋಫಿ ಅನಾವರಣ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ

0


ಸುಳ್ಯ ಮಾರ್ನಿಂಗ್ ಕ್ರಿಕೆಟ್ ಕ್ಲಬ್ ಇದರ ದಶ ಸಂಭ್ರಮದ ಪ್ರಯುಕ್ತ ಡಿ.24,25 ರಂದು ನಡೆಯಲಿರುವ ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾಟದ ಟ್ರೋಫಿ ಅನಾವರಣ ಕಾರ್ಯಕ್ರಮ ಹಾಗೂ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.


ಟ್ರೋಫಿಯನ್ನು ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಅನಾವರಣಗೊಳಿಸಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಶರೀಫ್ ಜಟ್ಟಿಪಳ್ಳ, ಎಂ ಸಿ ಸಿ ಅಧ್ಯಕ್ಷ ಗಿರೀಶ್ ಅಡ್ಪಂಗಾಯ, ಕಾರ್ಯದರ್ಶಿ ರವಿ ಮುಳ್ಯ,ಕೋಶಾಧಿಕಾರಿ ಸಂತೋಷ್ ರೈ ಕಾನತ್ತಿಲ,ನಿರ್ದೇಶಕರಾದ ಇಸಾಕ್ ಬೆನಕ,ರೂಪೇಶ್ ವಿಕ್ರಾಂತ್ ಹಾಗೂ ಎಂ ಸಿ ಸಿ ಸದಸ್ಯರು ಉಪಸ್ಥಿತರಿದ್ದರು.