ನವೋದಯ ಶಾಲೆಯ ಮೂರನೆ ಸುತ್ತಿನ ಆಯ್ಕೆ ಪಟ್ಟಿ ಪ್ರಕಟ

0


ಬೆಳ್ಳಾರೆ ಮತ್ತು ಸುಳ್ಯದ ಜ್ಞಾನದೀಪ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆ


ಜವಹರ್ ನವೋದಯ ವಿದ್ಯಾಲಯದ ಆರನೇ ತರಗತಿ ಪ್ರವೇಶ ಪರೀಕ್ಷೆಯ ಮೂರನೆ ಸುತ್ತಿನ ಆಯ್ಕೆ ಪಟ್ಟಿ ಪ್ರಕಟಗೊಂಡಿದ್ದು, ಬೆಳ್ಳಾರೆ ಮತ್ತು ಸುಳ್ಯದ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಿಂದ ತರಬೇತಿ ಪಡೆದ ಇಬ್ಬರು ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. 2022- 23ನೇ ಸಾಲಿನಲ್ಲಿ ಸಂಸ್ಥೆಯಿಂದ ತರಬೇತಿ ಪಡೆದ ಒಟ್ಟು18 ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. ಸುಳ್ಯ ತಾಲೂಕು ಪೆರುವಾಜೆಯ ಮನೋಹರ ಮಣಿಯಾಣಿ ಮತ್ತು ಶಶಿಪ್ರಭಾ ದಂಪತಿಗಳ ಪುತ್ರ ಬೆಳ್ಳಾರೆ ಜ್ಞಾನಗಂಗ ಸೆಂಟ್ರಲ್ ಸ್ಕೂಲ್ ನ ಅಜೇಯ ಕೃಷ್ಣ ಮನೋಹರ ಮಣಿಯಾಣಿ ಮತ್ತು ಮಂಡೆಕೋಲು ಗ್ರಾಮ ಪೇರಾಲು ಸೊರಂಜ ವಿಶ್ವನಾಥ ಮತ್ತು ಚಿತ್ರ ಯು.ಕೆ ದಂಪತಿಗಳ ಪುತ್ರ ಕೃತಿನ್ ಎಸ್. ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ.


165 ವಿದ್ಯಾರ್ಥಿಗಳು ಆಯ್ಕೆ
ಜ್ಞಾನದೀಪ ಸಂಸ್ಥೆಯು 2008 ರಿಂದ ನವೋದಯ ಪ್ರವೇಶ ಪರೀಕ್ಷೆಗೆ ಸಿದ್ಧತಾ ತರಗತಿಗಳನ್ನು ನಡೆಸುತ್ತಿದ್ದು, 2022- 23ನೇ ಸಾಲಿನ ವರೆಗೆ ಇಲ್ಲಿ ತರಬೇತಿ ಪಡೆದ 165 ವಿದ್ಯಾರ್ಥಿಗಳು ನವೋದಯದ ಶಾಲೆಗೆ ಆಯ್ಕೆಯಾಗಿದ್ದಾರೆ. ಪ್ರಸಕ್ತ 2023-24 ನೇ ಸಾಲಿನ ನವೋದಯ ಪ್ರವೇಶಕ್ಕೆ ಬೆಳ್ಳಾರೆ, ಸುಳ್ಯ ಮತ್ತು ಉಪ್ಪಿನಂಗಡಿಯಲ್ಲಿ ಸಿದ್ಧತಾ ತರಗತಿಗಳು ನಡೆಯುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.