ಅರಂತೋಡು ಹಾಲು ಉತ್ಪಾದಕ ಸಹಕಾರ ಸಂಘದ ಚುನಾವಣೆ

0

ಅರಂತೋಡು ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ಒಟ್ಟು 11 ಮಂದಿ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಸ್ಥಾನದಿಂದ ಭಾರತಿ ಯು., ಚಂದ್ರಪ್ರಕಾಶ್ ಪಿ.ಎಂ., ಗಂಗಾಧರ ಯು.ಡಿ., ಜನಾರ್ದನ ಸಿ. ಚೋಡಿಪಣೆ, ಕಿರಣ್ ಎಸ್., ಮೋಹನ ಎ., ನಾರಾಯಣ ಕೆ‌.ಸಿ., ಪ್ರಮೀಳ ಪಿ., ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನದಿಂದ ಮಾಲಿನಿ ಯು.ವಿ. ಮಹಿಳಾ ಮೀಸಲು ಸ್ಥಾನದಿಂದ ಗೀತಾ ಸರಸ್ವತಿ ಮತ್ತು ಜಾನಕಿ ಸೇರಿದಂತೆ ಒಟ್ಟು 11 ಮಂದಿ ನಿರ್ದೇಶಕರುಗಳಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಇಬ್ಬರು ನಿರ್ದೇಶಕರ ಆಯ್ಕೆಯಾಗಬೇಕಿದ್ದು, ಇದುವರೆಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಮುಂದಿನ ದಿನಗಳಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ತಿಳಿದುಬಂದಿದೆ.