ಮರ್ಕಂಜ: ಮೂಡ್ನೂರು ಮರ್ಕಂಜ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಪುನರ್ರಚನೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡ್ನೂರು ಮರ್ಕಂಜ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಸಭೆ ಡಿ.23ರಂದು ನಡೆಸಲಾಯಿತು. ಸಭೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ನೂತನ ಸಮಿತಿಯನ್ನು ರಚನೆ ಮಾಡಲಾಯಿತು.

ನೂತನ ಸಮಿತಿ : ಭರತ್ ಕುಮಾರ್ ಕೊಂಪಳಿ ಗೌರವ ಅಧ್ಯಕ್ಷರು, ನವೀನ್ ನಳಿಯಾರ್ ಅಧ್ಯಕ್ಷರು, ಸೋಮಶೇಖರ ಅಂಗಡಿ ಮಜಲು ಉಪಾಧ್ಯಕ್ಷರು, ರಮ್ಯ ಉಪಾಧ್ಯಕ್ಷರು, ಬಾಲಚಂದ್ರ ಗುರುಂಪು ಪ್ರಧಾನ ಕಾರ್ಯದರ್ಶಿ, ರವಿ ಬೊಮ್ಮಟ್ಟಿ ಸಂಘಟನಾ ಕಾರ್ಯದರ್ಶಿ, ಸುಜಾತ ಅಂಗಡಿ ಮಜಲು ಸಂಘಟನಾ ಕಾರ್ಯದರ್ಶಿ, ಗಿರೀಶ್ ಕುದನಕೋಡಿ ಸಹ ಕಾರ್ಯದರ್ಶಿ, ಮಹೇಶ್ ಕಂಚಿಪಿಲಿ ಸಹಕಾರ್ಯದರ್ಶಿ, ಮುಖ್ಯೋಪಾಧ್ಯಾಯರಾದ ದೇವರಾಜ್ ಖಜಾಂಚಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನೂತನ ಹಳೆ ವಿದ್ಯಾರ್ಥಿ ಸಂಘದ ರಚನೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಶಶಿಕಾಂತ ಬೂಡು ನಿಕಟಪೂರ್ವ ಜೊತೆ ಕಾರ್ಯದರ್ಶಿ ಹಾಗೂ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಾಗೂ ಹಾಲಿ ಪಂಚಾಯತ್ ಸದಸ್ಯರಾದ ಗೋವಿಂದ ಅಳವುಪಾರೆ ಶಾಲಾ ಶಿಕ್ಷಕರು, ಹಳೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.