ಸರಕಾರಿ ಸೇವೆಯಿಂದ ನಿವೃತ್ತಗೊಳ್ಳುತ್ತಿರುವ ದೈ.ಶಿ. ಶಿಕ್ಷಕಿ ಎ.ಜಿ ಭವಾನಿಯವರಿಗೆ ನೂಜಾಲು ಮನೆಯಲ್ಲಿ ಗೌರವ

0

ಸುದೀರ್ಘ 38 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ತನ್ನ ಸರಕಾರಿ ಸೇವೆಯಿಂದ ಇದೇ ಡಿ.31 ರಂದು ನಿವೃತ್ತಗೊಳುತ್ತಿರುವ ಗಾಂಧಿನಗರ ಕೆಪಿಎಸ್ ನ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಎ.ಜಿ ಭವಾನಿಯವರಿಗೆ ಅವರ ಹಿರಿಯ ಸಹೋದರಿ, ಐವರ್ನಾಡಿನ ನೂಜಾಲು ಶ್ರೀಮತಿ ಶಾರದಾ ಪದ್ಮನಾಭ ಗೌಡರವರ ಮನೆಯಲ್ಲಿ ಗೌರವ ಸನ್ಮಾನ ಡಿ. 24 ರಂದು ನಡೆಯಿತು.

ಪದ್ಮನಾಭ ಗೌಡ ದಂಪತಿಗಳು ಹಾಗೂ ಅವರ ಮಕ್ಕಳು, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಎ.ಜಿ ಭವಾನಿ ಹಾಗೂ ಅವರ ಪತಿ ಎಲ್ಯಣ್ಣ ಗೌಡ ದಂಪತಿಗಳಿಗೆ ಶಾಲು, ಹಾರ, ಫಲಪುಷ್ಪ,ಪೇಟ ತೊಡಿಸಿ ಸ್ಮರಣಿಕೆ ನೀಡಿ ಚಿನ್ನದ ಉಂಗುರ ತೊಡಿಸಿ ಆತ್ಮೀಯವಾಗಿ ಗೌರವಿಸಿದರು.

ಈ ಸಂದರ್ಭದಲ್ಲಿ ಎ.ಜಿ ಭವಾನಿ ದಂಪತಿಗಳನ್ನು ಸೇರಿದ ಎಲ್ಲಾ ನೆಂಟರಿಷ್ಟರು, ಬಂಧುಗಳು ಪ್ರತ್ಯೇ ಪ್ರತ್ಯೇಕವಾಗಿ ಸನ್ಮಾನಿಸಿ ಗೌರವಿಸಿದರು.

ನಂತರ ನೂಜಾಲು ಪದ್ಮನಾಭ ಗೌಡ, ಶ್ರೀಮತಿ ಮಣಿಪವಿತ್ರ ಬಂಗಾರಕೋಡಿ, ಶ್ರೀಮತಿ ಹಿತಾಶ್ರೀ ಅಂಬಿಕಾಪ್ರಸಾದ್ ರವರು ಎ.ಜಿ ಭವಾನಿಯವರ ಬಗ್ಗೆ ಮಾತನಾಡಿ, ಅವರು ಸರ್ಕಾರಿ ಸೇವೆ ಸಲ್ಲಿಸಿದ ಸಂದರ್ಭ ಅವರ ಸೇವಾ ನಿಷ್ಠೆ, ಪ್ರಾಮಾಣಿಕತೆ, ಪರೋಪಕಾರಿ, ಮಾರ್ಗದರ್ಶನಗುಣಗಳನ್ನು ಬಣ್ಣಿಸಿ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.

ಗೌರವ ಸ್ವೀಕರಿಸಿದ ಬಳಿಕ ಎ.ಜಿ ಭವಾನಿಯವರು ಮಾತನಾಡಿ, ಸರಕಾರಿ ಸೇವೆ ಸಲ್ಲಿಸುವ ಸಂದರ್ಭ ತನಗೆ ಮಾರ್ಗದರ್ಶನ ನೀಡಿದ ತನ್ನ ತಂದೆ-ತಾಯಿ, ತನ್ನ ಅಣ್ಣ, ತನ್ನ ಕುಟುಂಬ ವರ್ಗದವರಿಗೆ ಕೃತಜ್ಞತೆ ಸಲ್ಲಿಸುವ ಸಂದರ್ಭ ಕಣ್ಣೀರಾಗಿ ಎಲ್ಲರಿಗೂ ಮನದಾಳದ ಕೃತಜ್ಞತೆ ಸಲ್ಲಿಸಿದರು.

ಭವಾನಿ ಟೀಚರ್ ರವರ ಅಕ್ಕನ ಮಗ, ಯಶ್ವಿತ್ ಕಾಳಮ್ಮನೆಯವರು ಟೀಚರ ಪರಿಚಯ ಮಾಡಿ, ಪ್ರಾಸ್ತಾವಿಕ ಮಾತನಾಡಿದರು.