ಪಂಜ: ಜೇಸಿ ಸಪ್ತಾಹ-ಕ್ರೀಡೋತ್ಸವ

0

🔹ಮುಕ್ತ ಹಗ್ಗಜಗ್ಗಾಟ ಪಂದ್ಯಾಟ🔹 ಜೈ ಹನುಮಾನ್ ಸೊಂಕಾಲು ‘ಎ’ (ಪ್ರಥಮ)🔹 ಟೀಮ್ ಸಮೃದ್ಧಿ ಅರಂತೋಡು (ದ್ವಿತೀಯ)

ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾಹದ ಅಂಗವಾಗಿ ಡಿ.24 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಕ್ರೀಡೋತ್ಸವದಲ್ಲಿ ಹಗ್ಗಜಗ್ಗಾಟ ಪಂದ್ಯಾಟ ರೋಮಾಂಚಕಾರಿಯಾಗಿತ್ತು.

ಲೆವೆಲ್ ಮಾದರಿಯ ಪುರುಷರ ಮುಕ್ತ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಬಲಿಷ್ಠ ತಂಡಗಳು ಪಾಲ್ಗೊಂಡಿತ್ತು. ಪಂದ್ಯಾಟಕ್ಕಾಗಿ ಸುಸಜ್ಜಿತ ಅಂಕಣವನ್ನು ನಿರ್ಮಿಸಲಾಗಿತ್ತು.
ಇದೇ ವೇಳೆ ಕೆಸರು ಗದ್ದೆಯಲ್ಲಿ ಆಹ್ವಾನಿತ ತಂಡಗಳ ವಾಲಿಬಾಲ್, ಮಕ್ಕಳಿಗೆ,ಪುರುಷರಿಗೆ,ಮಹಿಳೆಯರಿಗೆ ವಿವಿಧ ಮನೋರಂಜನೆ ಆಟಗಳು ನಡೆಯಿತು.

550 ಕೆ.ಜಿ. 8 ಜನರ ಲೆವೆಲ್ ಮಾದರಿಯ ಪುರುಷರ ಮುಕ್ತ ಹಗ್ಗಜಗ್ಗಾಟ ಜೇಸಿ ಟ್ರೋಫಿ -2023 ಪಂದ್ಯಾಟದಲ್ಲಿ ಪ್ರಥಮ ರೂ.15023 , ದ್ವಿತೀಯ ರೂ.10023, ತೃತೀಯ ಮತ್ತು ಚತುರ್ಥ ತಲಾ ರೂ.3023 ನಗದು ಬಹುಮಾನ ಹಾಗೂ ಜೇಸಿ ಟ್ರೋಫಿ ನೀಡಲಾಯಿತು.

ಪಂದ್ಯಾಟದಲ್ಲಿ ಜೈ ಹನುಮಾನ್ ಸೊಂಕಾಲು ಎ ಪ್ರಥಮ, ಟೀಮ್ ಸಮೃದ್ಧಿ ಅರಂತೋಡು ದ್ವಿತೀಯ, ಯುವ ಬ್ರದರ್ಸ್ ಕೆ.ಎಲ್ ತೃತೀಯ,ಜೈ ಹನುಮಾನ್ ಸೊಂಕಾಲು ಬಿ ಚತುರ್ಥ ಸ್ಥಾನ ಪಡೆದಿದ್ದು,ಬಹುಮಾನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯೋಗೀಶ್ ಚಿದ್ಗಲ್, ಸುದ್ದಿ ಬಿಡುಗಡೆ ಪತ್ರಿಕೆ ವರದಿಗಾರ ಮಧು ಪಂಜ, ವೀಕ್ಷಕ ವಿವರಣೆ ನೀಡಿದ ಸುರೇಶ್ ಪಡಿಪಂಡ ನೆಲ್ಯಾಡಿ ರವರು ಬಹುಮಾನ ವಿತರಣೆ ಮಾಡಿದರು.ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ ‌ಸಭಾಧ್ಯಕ್ಷತೆ ವಹಿಸಿದ್ದರು.ನಿಕಟಪೂರ್ವಾಧ್ಯಕ್ಷ ಶಿವಪ್ರಸಾದ್ ಹಾಲೆಮಜಲು,
ಕಾರ್ಯಕ್ರಮ ಸಂಯೋಜಕರಾದ ವಿನ್ಯಾಸ್ ಕೊಚ್ಚಿ,ವಿಜೇಶ್ ಹಿರಿಯಡ್ಕ.
ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಯರಾಮ ಕಲ್ಲಾಜೆ ಸ್ವಾಗತಿಸಿದರು ಮತ್ತು ವಂದಿಸಿದರು.

ಸಮಾರೋಪ : ಸಮಾರೋಪ ಸಮಾರಂಭದಲ್ಲಿ ಸಭಾಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜೇಸಿಐ ಪೂರ್ವ ವಲಯಾಧ್ಯಕ್ಷ ಅಶೋಕ್ ಚೂಂತಾರು , ಆದಿಶಕ್ತಿ ಟ್ರಾನ್ಸ್ ಪೋರ್ಟ್ ನ ಮಾಲಕ ರಾಜೇಶ್ ಕಿರಿಭಾಗ ಹಾಗೂ.
ಘಟಕದ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ನಿಕಟಪೂರ್ವಾಧ್ಯಕ್ಷ ಶಿವಪ್ರಸಾದ್ ಹಾಲೆಮಜಲು, ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ , ಕಾರ್ಯಕ್ರಮ ಸಂಯೋಜಕ ವಿಜೇಶ್ ಹಿರಿಯಡ್ಕ.
ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಾಲಿಬಾಲ್ ಪಂದ್ಯಾಟ ಫಲಿತಾಂಶ
ಆಹ್ವಾನಿತ ತಂಡಗಳ ಕೆಸರು ಗದ್ದೆ ವಾಲಿಬಾಲ್ ಪಂದ್ಯಾಟದಲ್ಲಿ ಸಾಯಿ ಮಧುರ ತಂಡ ಪ್ರಥಮ, ಶಿವ ಪ್ರೆಂಡ್ಸ್
ಪಂಜ ದ್ವಿತೀಯ ಸ್ಥಾನ ಪಡೆದಿದ್ದು,
ಬಹುಮಾನ ಸ್ವೀಕರಿಸಿದರು.
ಇದೇ ವೇಳೆ ಕೆಸರುಗದ್ದೆ
ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ದತ್ತಿನಿಧಿ ವಿತರಣೆ : ಕೆಸರು ಗದ್ದೆ ದಶಮಾನೋತ್ಸವದಲ್ಲಿ ಸ್ಥಾಪಿಸಿರುವ
ದತ್ತಿನಿಧಿಯನ್ನು ವಿದ್ಯಾರ್ಥಿಗಳಾದ
ಕುಲ್ ದೀಪ್, ಪ್ರಖ್ಯಾತ್, ವಿನಯ್ ಕೆ
ರವರಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ತೀರ್ಥಾನಂದ ಕೊಡೆಂಕಿರಿ ವೇದಿಕೆಗೆ ಆಹ್ವಾನಿಸಿದರು. ಲೋಕೇಶ್ ಆಕ್ರಿಕಟ್ಟೆ ಸ್ವಾಗತಿಸಿದರು.ಶಿವಪ್ರಸಾದ್ ಹಾಲೆಮಜಲು ಬಹುಮಾನ ವಿಜೇತರ ಪಟ್ಟಿಯಾಚಿಸಿದರು.
ವಾಚಣ್ಣ ಕೆರೆಮೂಲೆ ವಂದಿಸಿದರು.