ಬೆಳ್ಳಾರೆ ಜೆಸಿಐ ಪದಪ್ರದಾನ ಸಮಾರಂಭಜೇಸಿಯಿಂದ ವ್ಯಕ್ತಿತ್ವ ವಿಕಸನದೊಂದಿಗೆ ಸಮುದಾಯ ಬೆಳವಣಿಗೆ: ಗೋಪಾಲಕೃಷ್ಣ ಟಿ

0

ಉತ್ತಮ ನಾಯಕತ್ವ ರೂಪಿಸಿಕೊಳ್ಳುವುದನ್ನು ಜೇಸಿ ಸಂಸ್ಥೆಗಳಿಂದ ಕಲಿಯಬೇಕಿದೆ: ಅಶ್ವಿನ್ ಎಲ್ ಶೆಟ್ಟಿ

ವ್ಯಕ್ತಿತ್ವ ವಿಕಸನದ ಕಾರ್ಯದೊಂದಿಗೆ ಸಮುದಾಯದ ಬೆಳವಣಿಗೆಯಲ್ಲಿ ಜೇಸಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶ ಗೋಪಾಲಕೃಷ್ಣ ಟಿ ಹೇಳಿದರು. ಅವರು ಬೆಳ್ಳಾರೆ ದೇವಿ ಹೈಟ್ಸ್ ನ ಅನುಗ್ರಹ ಸಭಭವನದಲ್ಲಿ ನಡೆದ ಜೆಸಿಐ ಬೆಳ್ಳಾರೆ ಮತ್ತು ಯುವ ಜೆಸಿ ವಿಭಾಗ ಬೆಳ್ಳಾರೆ ಇದರ 2023-24ನೇ ಸಾಲಿನ ಪದಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಆಡಳಿತ ಅಧಿಕಾರಿ ಅಶ್ವಿನಿ ಎಲ್ ಶೆಟ್ಟಿ ಮಾತನಾಡಿ, ತರಬೇತಿಯ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯ ಜೇಸಿ ಮಾಡುತ್ತಿದೆ. ಯಾವುದೇ ಕಾರ್ಯವನ್ನು ಗೊತ್ತಿಲ್ಲ ಎಂದಾಗ ಮಾತ್ರ ಕಲಿಯಲು ಸಾಧ್ಯ. ನಾಯಕತ್ವ ಸುಲಭದ ಕೆಲಸವಲ್ಲ, ಉತ್ತಮ ನಾಯಕತ್ವ ರೂಪಿಸಿಕೊಳ್ಳುವುದನ್ನು ಜೇಸಿ ಸಂಸ್ಥೆಗಳಿಂದ ಕಲಿಯಬೇಕಿದೆ ಎಂದರು. ನೂತನ ಸದಸ್ಯರಿಗೆ ಪ್ರಮಾಣವಚನ ಭೋದಿಸಿದ ನಿಯೋಜಿತ ವಲಯ ಉಪಾಧ್ಯಕ್ಷ ಅಭಿಷೇಕ್ ಜಿ ಎಂ, ವಲಯಾಧ್ಯಕ್ಷ ಗಿರೀಶ್ ಶುಭ ಹಾರೈಸಿದರು. ನಿಯೋಜಿತ ಅಧ್ಯಕ್ಷರಾಗಿ ಜಗದೀಶ್ ರೈ ಪೆರುವಾಜೆ, ಕಾರ್ಯದರ್ಶಿಯಾಗಿ ವಾಸುದೇವ ಪೆರುವಾಜೆ, ನಿಕಟ ಪೂರ್ವಧ್ಯಕ್ಷರಾಗಿ ರವೀಂದ್ರನಾಥ ಶೆಟ್ಟಿ ಅಜಪಿಲ ಹಾಗೂ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವಧ್ಯಕ್ಷೆ ನಿರ್ಮಲಾ ಜಯರಾಮ್, ಕಾರ್ಯದರ್ಶಿ ಆನಂದ ಉಮಿಕ್ಕಳ ಉಪಸ್ಥಿತರಿದ್ದರು. ಪೂರ್ವಾಧ್ಯಕ್ಷ ರವೀಂದ್ರನಾಥ ಶೆಟ್ಟಿ ಅಜಪಿಲ ವಾರ್ಷಿಕ ವರದಿ ವಾಚಿಸಿದರು.

ನೂತನ ಕಾರ್ಯದರ್ಶಿ ವಾಸುದೇವ ಆಚಾರ್ಯ ಪೆರುವಾಜೆ ವಂದಿಸಿದರು. ಪೂರ್ವಧ್ಯಕ್ಷರುಗಳಾದ ಪ್ರಸಾದ್ ಸೇವಿತ, ಪ್ರದೀಪ್ ಕುಮಾರ್ ರೈ ಪನ್ನೆ ಸಹಕರಿಸಿದರು. ಪದಪ್ರದಾನ ಸಮಾರಂಭದ ಅಂಗವಾಗಿ ಕಲಾ ಮಂದಿರ್ ಬೆಳ್ಳಾರೆ ಇವರಿಂದ ಅಶೋಕ್ ಬಸ್ತಿಗುಡ್ಡೆ ನಿರ್ದೇಶನದಲ್ಲಿ, ಪ್ರಮೋದ್ ಕುಮಾರ್ ರೈ ಬೆಳ್ಳಾರೆ ಸಂಯೋಜನೆಯಲ್ಲಿ ನೃತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು..