ಮಂಗಳೂರು ಸಂತ ರನ್ ನಲ್ಲಿ ಜಸ್ಮಿತಾ ಕೊಡೆಂಕಿರಿ ಪ್ರಥಮ

0

ಡಿಸೆಂಬರ್ 24 ರಂದು ಮಂಗಳೂರಿನಲ್ಲಿ ಡೆಕತ್ಲಾನ್ ನವರು ಏರ್ಪಡಿಸಿದ ಸಂತ ರನ್ ನಲ್ಲಿ ಜಸ್ಮಿತಾ ಕೊಡೆಂಕಿರಿಯವರು ಪ್ರಥಮ ಸ್ಥಾನದೊಂದಿಗೆ 4000 ಮೌಲ್ಯದ ಶೂ ವನ್ನು ಪಡೆದುಕೊಂಡಿದ್ದಾರೆ. ಇವರು ಅನೇಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಮ್ಯಾರಥಾನ್ ನಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ಬಳ್ಪ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು ಬಳ್ಪ ಗ್ರಾಮದ ಕೊಡೆಂಕಿರಿ ವಾಚಣ್ಣ ಗೌಡ ಮತ್ತು ದಮಯಂತಿ ದಂಪತಿಗಳ ಪುತ್ರಿ.