ಫಖ್ರುದ್ದೀನ್ ತಂಙಳ್ ಸ್ಮಾರಕ ಗ್ರಂಥಾಲಯಕ್ಕೆ ವಿಧಾನಸಭಾ ಅಧ್ಯಕ್ಷ ಯು. ಟಿ. ಖಾದರ್ ರವರಿಂದ ಲೋಕಾರ್ಪಣೆ
ದುಗ್ಗಲಡ್ಕ ಜಂಇಯ್ಯತುಲ್ ತರ್ಬಿಯತಿಲ್ ಬುಖಾರಿಯಾ ಇದರ 30ನೇ ವಾರ್ಷಿಕ ಖುತುಬಿಯತ್,ಹಾಗೂ ಅಸಯ್ಯದ್ ಫಕ್ರುದ್ದೀನ್ ತಂಗಳ್ ರವರ 20 ನೇ ಆಂಡ್ ನೇರ್ಚೆ, ಉರೂಸ್ ಸಮಾರಂಭಕ್ಕೆ ಡಿಸೆಂಬರ್ 28 ರಂದು ದುಗಲಡ್ಕ ದರ್ಗಾ ವಠಾರದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನಅಸ್ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ರವರ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಿತು. ಸಂಸ್ಥೆಯ ವತಿಯಿಂದ ನಿರ್ಮಿಸಲಾಗಿರುವ ಸಯ್ಯದ್ ಫಖ್ರುದ್ದೀನ್ ತಂಙಳ್ ರವರ ಸ್ಮಾರಕ ಗ್ರಂಥಾಲಯವನ್ನು ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು ಟಿ ಖಾದರ್ ಲೋಕಾರ್ಪಣೆಗೊಳಿಸಿದರು.
ಬಳಿಕ ನಡೆದ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿಗಳಾದ ಬಂಬ್ರಾಣ ಅಬ್ದುಲ್ ಖಾದಿರ್ ಖಾಸಿಮಿ ಹಾಗೂ ಕೀಚೇರಿ ಅಬ್ದುಲ್ ಗಫೂರ್ ಮೌಲವಿ ರವರು ಭಾಗವಹಿಸಿ ಇಸ್ಲಾಮಿನ ಆದರ್ಶ ತತ್ವಗಳ ಬಗ್ಗೆ, ಮತ್ತು ದೀನಿಗಾಗಿ ಸೇವೆ ಮಾಡಿದ ಮಹಾನರ ಆದರ್ಶ ತತ್ವಗಳ ಬಗ್ಗೆ ಪ್ರಭಾಷಣ ನೀಡಿದರು.
ಉರೂಸ್ ಸಮಾರಂಭದ ಅಂಗವಾಗಿ ಡಿ.29 ರಂದು ಸಂಜೆ 3 ಗಂಟೆಗೆ ಖ್ಯಾತವಾಗ್ಮಿ ಸಿಂಸಾರುಲ್ ಹಕ್ ಹುದವಿ ಉಪನ್ಯಾಸ ನೀಡಲಿದ್ದಾ.ರಾತ್ರಿ ಬಹು ಉಸ್ಮಾನ್ ಫೈಝಿ ತೋಡರ್ ಹಾಗೂ ಬಹು ಮಹಮ್ಮದ್ ಹನೀಫ್ ನಿಜಾಮಿ ಪ್ರಭಾಷಣ ನೀಡಲಿದ್ದು ಉಲಮಾ ಪಂಡಿತರಾದ ಮಾಹಿನ್ ಮುಸ್ಲಿಯರ್ ಸಾಮೂಹಿಕ ದುವಾ ನೇತೃತ್ವವನ್ನು ವಹಿಸಲಿದ್ದಾರೆ.
ಡಿ.30 ರಂದು ಬೆಳಿಗ್ಗೆ 10 ಗಂಟೆಗೆ ಜಾಮಿಯಾ ಬುಕಾರಿಯ ಅರಬಿಕ್ ಕಾಲೇಜಿನ ವಿದ್ಯಾರ್ಥಿಗಳ ಫೆಸ್ಟ್ ನಡೆಯಲಿದ್ದು
ಸಮಾರೋಪ ಸಮಾರಂಭದ ದಿನವಾದ ಡಿಸೆಂಬರ್ 31 ರಂದು ರಾತ್ರಿ ಫಖ್ರುದ್ದೀನ್ ತಂಙಳ್ ರವರ ಮಖಾಮಿನಲ್ಲಿ ಖತಂ ದುವಾ ನಡೆಯಲಿದೆ.
ಅದೇ ದಿನ ಧಾರ್ಮಿಕ ಪ್ರಭಾಷಣ ವೇದಿಕೆಯಲ್ಲಿ ವಿದ್ವಾಂಸರಾದ ಮೌಲಾನ ನಜೀಬ್ ಮೌಲವಿ ಹಾಗೂ ಬಹು.ಬಶೀರ್ ಪೈಝಿ ಅಲ್ ಹಾಮಿದಿ ಭಾಗವಹಿಸಲಿದ್ದಾರೆ.
ಬಳಿಕ ಖುತುಬಿಯತ್ ನೇರ್ಚೆ
ನಡೆಯಲಿದ್ದು ಬೆಳಗಿನ ನಮಾಜ್ ನಂತರ ಸಾರ್ವಜನಿಕ ಅನ್ನದಾನದೊಂದಿಗೆ ಕಾರ್ಯಕ್ರಮ ಅಂತಿಮಗೊಳ್ಳಲಿದೆ.