ಅಮರಮುಡ್ನೂರು
ಗ್ರಾಮ ಪಂಚಾಯತ್ ನಲ್ಲಿ ಕೇಂದ್ರ ಸರ್ಕಾರದ ನಮ್ಮ ಸಂಕಲ್ಪ ವಿಕಸಿತ ಭಾರತ ಯಾತ್ರೆಯ ಮಾಹಿತಿ ಕಾರ್ಯಕ್ರಮ ಹಾಗೂ ಗ್ರಾಮದ ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಡಿ.29 ರಂದು ನಡೆಯಿತು.
ಬ್ಯಾಂಕ್ ಆಫ್ ಬರೋಡ ಕುಕ್ಕುಜಡ್ಕ ಮತ್ತು ದೊಡ್ಡ ತೋಟ ಶಾಖೆ ಹಾಗೂ ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಕುಕ್ಕುಜಡ್ಕ ಇದರ ವತಿಯಿಂದ ಕೇಂದ್ರ ಸರ್ಕಾರದ ನಮ್ಮ ಸಂಕಲ್ಪ ವಿಕಸಿತ ಭಾರತ ಯಾತ್ರೆಯ ಸದುದ್ದೇಶದ ಕುರಿತು ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಪಂಚಾಯತ್ ವಠಾರದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ 5 ಮಂದಿ ವಿವಿಧ ಕ್ಷೇತ್ರದ ಸಾಧಕರಾಗಿರುವ
ಹಿರಿಯ ವೈದ್ಯರಾದ ಗೋಪಾಲಕೃಷ್ಣ ಭಟ್, ಪುಟ್ಟಣ್ಣ ಗೌಡ ಶೇಣಿ, ಶ್ಯಾಮಲಾ ಮುಂಡಕಜೆ, ತೇಜಸ್ವಿ ಕಡಪಳ, ನಿತಿನ್ ಚೊಕ್ಕಾಡಿ ಯವರನ್ನು ಸನ್ಮಾನಿಸಲಾಯಿತು.
ಪಂಚಾಯತ್ ಅಧ್ಯಕ್ಷೆ ಜಾನಕಿ ಕಂದಡ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಭುವನೇಶ್ವರಿ ಪದವು, ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೇಶವ ಕರ್ಮಾಜೆ, ಬ್ಯಾಂಕ್ ಆಪ್ ಬರೋಡಾ ಶಾಖಾವ್ಯವಸ್ಥಾಪಕ ಅರುಣ್ ಜಿ, ಉದಯಕುಮಾರ್
ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಂಚಾಯತ್ ಸದಸ್ಯೆ ತೇಜಾವತಿ ಕುಂಟಿಕಾನ ಪ್ರಾರ್ಥಿಸಿದರು.
ಪಂ.ಸದಸ್ಯೆ ದಿವ್ಯಾ ಮಡಪ್ಪಾಡಿ ಸ್ವಾಗತಿಸಿದರು. ಪಿ.ಡಿ.ಒ ದಯಾನಂದ ಪತ್ತುಕುಂಜ ಪ್ರತಿಜ್ಞಾ ವಿಧಿ ಬೋಧಿಸಿದರು.
ಪಂ.ಸದಸ್ಯ ಕೃಷ್ಣ ಪ್ರಸಾದ್ ಮಾಡಬಾಕಿಲು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸೊಸೈಟಿ ಮುಖ್ಯ
ಕಾರ್ಯನಿರ್ವಹಣಾಧಿಕಾರಿ,ನಿರ್ದೇಶಕರು, ಆರೋಗ್ಯಅಧಿಕಾರಿಗಳು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸದಸ್ಯರು ಹಾಗೂಗ್ರಾಮಸ್ಥರು ಭಾಗವಹಿಸಿದರು.
ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.