ಅರಂತೋಡು ಗ್ರಾಮ ಪಂಚಾಯತ್ ಮತ್ತು ಬ್ಯಾಂಕ್ ಆಫ್ ಬರೋಡ ಅರಂತೋಡು ಶಾಖೆಯ ಪ್ರಾಯೋಜಕತ್ವದಲ್ಲಿ ಕೇಂದ್ರ ಸರಕಾರದ ಯೋಜನೆಗಳನ್ನು ಪ್ರಚುರಪಡಿಸುವ ವಿಕಸಿತ ಭಾರತ ಸಂಕಲ್ಪ ಯಾತ್ರಾ ಕಾರ್ಯಕ್ರಮವು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಯವರ ಅಧ್ಯಕ್ಷತೆಯಲ್ಲಿ ಅರಂತೋಡು ಗ್ರಾಮ ಪಂಚಾಯತ್ ಅಮೃತಸ ಭಾಂಗಣದಲ್ಲಿ ಡಿ.30ರಂದು ಜರುಗಿತು. ಕಾರ್ಯಕ್ರಮವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಪ್ರಾಂಶುಪಾಲರಾದ ಕೆ. ಆರ್. ಗಂಗಾಧರ ಕುರುಂಜಿ ಅವರು ದೀಪ ಬೆಳಗಿಸಿ, ಉದ್ಘಾಟಿಸಿ, ಶುಭಹಾರೈಸಿದರು. ಆರಂತೋಡು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಸಾರುವ ನೃತ್ಯ ಪ್ರದರ್ಶನವನ್ನು ಮಾಡಿದರು.
ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ಯಮ, ಕ್ಷೇತ್ರದ ಹರಿಶ್ಚಂದ್ರ ಹೊದ್ದೆಟ್ಟಿ, ಜೇನು ಕೃಷಿ, ಕ್ಷೇತ್ರದಲ್ಲಿ ಸಾಧನೆ ಮಾಡಿದ ಸೀತಾರಾಮ ಪಿಂಡಿಮನೆ ಯವರನ್ನು ಗೌರವ ಪೂರ್ವಕವಾಗಿ ಗುರುತಿಸಲಾಯಿತು. ಬ್ಯಾಂಕ್ ಆಫ್ ಬರೋಡ ಮುದ್ರಾ ಯೋಜನೆಯ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಣೆ, ಹಾಗೂ ಅರಂತೋಡು ಸಹಕಾರಿ ಸಂಘದ ಕೃಷಿಕ ಫಲಾನುಭವಿಗಳಿಗೆ ಕೃಷಿ ಅಭಿವೃದ್ಧಿಸಾಲದ ಚೆಕ್ ವಿತರಣೆ ನಡೆಯಿತು.
ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ನವೋದಯ ಸ್ವ ಸಹಾಯ ಸಂಘಗಳ 2ಸಂಘಗಳನ್ನು ಫಲಕ ನೀಡಿ ಗುರುತಿಸಲಾಯಿತು. ಗ್ರಾಮ ಪಂಚಾಯತ್ 25 ಶೇಕಡ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ, ವಿಕಲಚೇತನ ಫಲಾನುಭವಿಗಳಿಗೆ, ನೀರಿನ ಟ್ಯಾಂಕ್, ಮಲಗುವ ಮಂಚ, ಗೋದ್ರೆಜ್ ಸೌಲಭ್ಯಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅರಂತೋಡು – ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಜಿ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಉಪಸ್ಥಿತರಿದ್ದರು. ಬ್ಯಾಂಕ್ ಆಫ್ ಬರೋಡ ಆರಂತೋಡು ಶಾಖೆಯ ಪ್ರಬಂಧಕ ಸತೀಶ್ ಕುಮಾರ್ ಸ್ವಾಗತಿಸಿ, ಆರಂತೋಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಕೇಂದ್ರ ಸರಕಾರದ ಯೋಜನೆಗಳ ವಿವರ ನೀಡುವುದರೊಂದಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಅರಂತೋಡು ತೆಕ್ಕಿಲ್ ಹೆಚ್ ಪಿ ಗ್ಯಾಸ್ ಏಜೆನ್ಸಿಯ ವ್ಯವಸ್ಥಾಪಕ ಧನರಾಜ್ ಊರುಪಂಜ ಮತ್ತು ಆರಂತೋಡು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರೇಷ್ಮಾ ಜಿ. ಇ. ಕಾರ್ಯಕ್ರಮ ನಿರೂಪಿಸಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾದ ಶ್ರೀಮತಿ ಭವಾನಿ ಚಿಟ್ಟನ್ನೂರು ವಂದಿಸಿದರು.
ಅರಂತೋಡು ಬ್ಯಾಂಕ್ ಆಫ್ ಬರೋಡ, ಮತ್ತುಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು. ವಿಕಾಸಿತ ಯಾತ್ರ ರಥದ ಬಳಿ ಆರಂತೋಡು ತೆಕ್ಕಿಲ್ ಹೆಚ್ ಪಿ ಗ್ಯಾಸ್ ಏಜೆನ್ಸಿಯವರು ಕಿಯೋಸ್ಕ್ ಮೂಲಕ ಉಜ್ಜಲ ಯೋಜನೆ ಮಾಹಿತಿಯನ್ನು ಗ್ರಾಮಸ್ಥರಿಗೆ ನೀಡಿ ಸಹಕರಿಸಿದರು.