ಸುಳ್ಯತಾಲೂಕು
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಜನಜಾಗೃತಿ ವೇದಿಕೆಇದರಸಹಯೋಗದಲ್ಲಿ ಅಜ್ಜಾವರದಲ್ಲಿ 1753 ನೇ ಮಧ್ಯವರ್ಜನ ಶಿಬಿರದ ನವ ಜೀವನ ಸಮಿತಿ ಸದಸ್ಯರಿಗೆ ನವಜೀವನೋತ್ಸವ ಕಾರ್ಯಕ್ರಮ ಸುಳ್ಯ ಯೋಜನಾ ಕಚೇರಿಯ ಸಭಾಂಗಣದಲ್ಲಿ ಡಿ.31 ರಂದು ನಡೆಯಿತು.
ತಾಲೂಕು ಜನಜಾಗೃತಿ ವೇದಿಕೆಅಧ್ಯಕ್ಷ ಲೋಕನಾಥ್ ಅಮಚೂರು ಉದ್ಘಾಟಿಸಿದರು. ಯೋಜನಾಧಿಕಾರಿ ನಾಗೇಶ್ ಪಿ ಪ್ರಾಸ್ತಾವಿಕ ಮಾತನಾಡಿದರು.
ನವ ಜೀವನ ಸಮಿತಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಪಾನಮುಕ್ತ ಜೀವನದ ಬದಲಾವಣೆ ಕುರಿತು ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯ ವಿವರ ತಿಳಿಸಿದರು.
ನವ ಜೀವನ ಸಮಿತಿ ಸದಸ್ಯ ಮನೋಜ್ ಮುಳ್ಯ, ರುಕ್ಮಯ್ಯ ಕೇರ್ಪಳ, ಕೋಟೇಶ್ ಸುಳ್ಯ, ಯೋಗೇಂದ್ರ ಸುಳ್ಯ, ಸೀತಾರಾಮ ದೊಡ್ಡ ತೋಟ ಅನಿಸಿಕೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಜನ ಜಾಗೃತಿ ವೇದಿಕೆ ಮಾಜಿ ಜಿಲ್ಲಾಧ್ಯಕ್ಷ ಎನ್. ಎ. ರಾಮಚಂದ್ರ, ತಾಲೂಕು ನಿಕಟಪೂರ್ವ ಅಧ್ಯಕ್ಷ ಮಹೇಶ್ ಕುಮಾರ್ ಮೇನಾಲ, ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಿವಪ್ರಕಾಶ್ ಅಡ್ಪಂಗಾಯ, ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಜನ ಜಾಗೃತಿ ವೇದಿಕೆಯ ಸದಸ್ಯ ವಿಜಯ ಕುಮಾರ್ ಉಬರಡ್ಕ,ಕಾಂತಮಂಗಲ ಶ್ರೀರಾಮ ನವ ಜೀವನ ಸಮಿತಿಯ ಅಧ್ಯಕ್ಷ ಆನಂದ ಅಡ್ಪಂಗಾಯ, ಅರಿಯಡ್ಕ ನವ ಜೀವನ ಸಮಿತಿ ಅಧ್ಯಕ್ಷ ಸೀತಾರಾಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಲ್ಲಡ್ಕ ಸೇವಾ ಪ್ರತಿನಿಧಿ ಶ್ರೀಮತಿ ಸುನಿತಾ ಸ್ವಾಗತಿಸಿ, ಸೇವಾ ಪ್ರತಿನಿಧಿ ಶ್ರೀಮತಿ ಸೌಮ್ಯ ವಂದಿಸಿದರು.
ನವ ಜೀವನ ಸಮಿತಿಯ ಸದಸ್ಯರ ಕುಟುಂಬಸ್ಥರು, ಶ್ರೀರಾಮ ನವಜೀವನ ಸಮಿತಿ ಸದಸ್ಯರು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.