ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಯಶಸ್ವಿ ಆನೆಯ ಮಾವುತರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀನಿವಾಸ ಧರ್ಮಸ್ಥಳ ಅವರು ಇಂದು ತನ್ನ ವೃತ್ತಿ ಜೀವನದಿಂದ ನಿವೃತ್ತಿಯಾಗಿರುತ್ತಾರೆ.
ಅವರನ್ನು ಶ್ರೀ ದೇವಳದ ವತಿಯಿಂದ ಬೀಳ್ಕೊಡಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿಯವರು ಶಾಲು ಹೊದಿಸಿ ಸನ್ಮಾನಿಸಿದರು. ಕಾರ್ಯನಿರ್ವಾಹಣಾಧಿಕಾರಿ ಡಾl ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರು, ದೇವಸ್ಥಾನದ ಸಿಬ್ಬಂದಿಗಳು ಉಪಸ್ಥಿತರಿದ್ದರು.
53 ವರ್ಷಗಳ ಸೇವೆ
ಶ್ರೀನಿವಾಸ ಅವರು ಮೂಲತಹ ಉಜಿರೆಯ ಕನ್ಯಾಡಿ ಅವರು. ಇವರ ತಂದೆ ಆನೆ ಮಾವುತರಾಗಿದ್ದವರು. ಉಜಿರೆಯಲ್ಲಿ ಖಾಸಗಿಯಾಗಿ ಸಾಕುತಿದ್ದ ಆನೆ ಕೃಷ್ಣ ಆನೆಯ ಮಾವುತಾಗಿ 25 ವರ್ಷ ಸೇವೆ ಸಲ್ಲಿಸಿದ್ದರು. ಬಳಿಕ 12 ವರ್ಷಗಳ ಕಾಲ ಧರ್ಮಸ್ಥಳ ಶಂಕರ ಆನೆಯ ಮಾವುತರಾದರು. 2008 ಕ್ಕೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಯಶಸ್ವಿ ಆನೆ ಹೊಸದಾಗಿ ಬಂದಾಗ ಶ್ರೀನಿವಾಸರನ್ನು ಮಾವುತರಾಗಿ ನೇಮಿಸಲಾಯಿತು ಹಾಗೂ ಅದನ್ನು ಪಳಗಿಸುವುದರಲ್ಲಿ ಯಶಸ್ವಿಯಾದರು. ಇವರು ಸಾಕಿದ ಕೃಷ್ಣ ಎಂಬ ಆನೆಯು ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಗುಂಡೂರಾವ್ ಆದಿಯಾಗಿ ಗಣ್ಯರಿಗೆ ಹೂ ಹಾರ ಹಾಕಿ ಸ್ವಾಗತಿಸಿದ ಆನೆಯಾಗಿದ್ದೂ 25 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಭಾಗವಹಿಸಿತ್ತು.