ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಆಶ್ರಯದಲ್ಲಿ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಇದರ ಸಹಯೋಗದೊಂದಿಗೆ
ಯವಕ ಮಂಡಲಗಳಿಗೆ ನಾಯಕತ್ವ ತರಬೇತಿ ಕಾರ್ಯಾಗಾರ
ಡಿ.31. ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ರಾಜ್ಯ ಭಜನಾ ಪರಿಷತ್ ಅಧ್ಯಕ್ಷ ಬಾಲಕೃಷ್ಣ ಪುತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಯುವ ಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಯುವ ಜನ ಸಂಯುಕ್ತ ಮಂಡಳಿಯ ಪೂರ್ವಾಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು , ಯುವ ಜನ ಸಂಯುಕ್ತ ಮಂಡಳಿಯ ಕಾರ್ಯದರ್ಶಿ ಗುರುರಾಜ್ ಅಜ್ಜಾವರ , ತರಬೇತುದಾರ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಪೆರುವಾಜೆಯ ಪ್ರಾಂಶುಪಾಲ ದಾಮೋದರ ಕನಜಾಲು , ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಕಾರ್ಯದರ್ಶಿ ಶರತ್ ಕುದ್ವ ,ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಾಗೂ ಕಾರ್ಯಕ್ರಮ ಸಂಯೋಜಕ ಪವನ್ ಪಲ್ಲತ್ತಡ್ಕ ,
ಕಾರ್ಯಕ್ರಮ ಸಂಯೋಜಕ
ಸಂಜಯ್ ನೆಟ್ಟಾರ್, ಜನಾರ್ಧನ ನಾಗತೀರ್ಥ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಥಳೀಯ ಸಂಘ ಸಂಸ್ಥೆಗಳ 7 ಪದಾಧಿಕಾರಿಗಳು ನಾಯಕತ್ವ ತರಬೇತಿಯ ಸದುಪಯೋಗ ಪಡೆದುಕೊಂಡರು. ಕಳೆದ ಎರಡು ವರ್ಷಗಳಿಂದ ಅನಾರೋಗ್ಯ ಪೀಡಿತ ಬಡ ಮಕ್ಕಳಿಗೆ ಧನಸಹಾಯ ಮಾಡುವ ಮೂಲಕ ಸೇವಾಕಾರ್ಯ ನಡೆಸಿಕೊಂಡು ಬರುತ್ತಿರುವ ಪಂಬೆತ್ತಾಡಿಯ “ಚಿಗುರು” ತಂಡಕ್ಕೆ ಯುವ ಜನ ಸಂಯುಕ್ತ ಮಂಡಳಿಯ ವತಿಯಿಂದ ನೋಂದಣಿ ಪ್ರಮಾಣ ಪತ್ರವನ್ನು ಹಸ್ತಾಂತರಿಸಲಾಯಿತು.
ಆಯುಷ್ಮಾನ್ ಭಾರತ ,ಆರೋಗ್ಯ ಕರ್ನಾಟಕ ಇನ್ನಿತರ ಯೋಜನೆಗಳಿಗೆ ಮೊಬೈಲ್ ಮುಖಾಂತರ ಆನ್ ಲೈನ್ ಅರ್ಜಿ ಸಲ್ಲಿಸುವ ಬಗ್ಗೆ ಯುವ ಜನ ಸಂಯುಕ್ತ ಮಂಡಳಿಯ ನಿರ್ದೇಶಕರಾದ ಮುರಳಿ ನಲಿಯಾರು ಮಾಹಿತಿ ನೀಡಿದರು .
.
ಕಾರ್ಯಕ್ರಮದಲ್ಲಿ ಪವನ್ ಪಲ್ಲತ್ತಡ್ಕ ಸ್ವಾಗತಿಸಿದರು, ಸಂದೀಪ್ ಪಲ್ಲೋಡಿ ಕಾರ್ಯಕ್ರಮ ನಿರೂಪಿಸಿ, ಜನಾರ್ಧನ ನಾಗತೀರ್ಥ ವಂದಿಸಿದರು.