ದ.ಕ. ಜಿಲ್ಲಾ ಗಾಣಿಗ – ಪಾಟಾಳಿ ಸಂಘದ ಜಿಲ್ಲಾ ಮಟ್ಟದ ಸಭೆ

0

ದಕ್ಷಿಣ ಕನ್ನಡ ಜಿಲ್ಲಾ ಗಾಣಿಗ-ಪಾಟಾಳಿ/ವಾಣಿಯನ್ ಸಮುದಾಯದ ಜಿಲ್ಲಾ ಮಟ್ಟದ ಸಭೆಯು ಡಿ.17 ರಂದು ಪುತ್ತೂರಿನ ಈಶ ವಿದ್ಯಾಲಯದ ಸಭಾಂಗಣದಲ್ಲಿ ಪುತ್ತೂರು ವಾಣಿಯ ಗಾಣಿಗ ಸಮುದಾಯ ಸೇವಾ ಸಂಘದ ಅಧ್ಯಕ್ಷರಾದ ಪ್ರಸಾದ್ ಕಲ್ಲರ್ಪೆರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮಂಗಳೂರು ಗಾಣಿಗ-ಪಾಟಾಳಿ/ವಾಣಿಯನ್ ಸಮುದಾಯ ಸೇವಾ ಸಂಘದ ನೂತನ ಜಿಲ್ಲಾ ಸಂಘವನ್ನು ರಚಿಸಲಾಯಿತು. ಜಿಲ್ಲಾ ಸಂಘದ ಗೌರವಾಧ್ಯಕ್ಷರಾಗಿ ಶಂಕರ ಪಾಟಾಳಿ ಪರಿವಾರಕಾನ ಸುಳ್ಯ, ಅಧ್ಯಕ್ಷರಾಗಿ ರಾಮ ಮುಗ್ರೋಡಿ ಮಂಗಳೂರು, ಉಪಾಧ್ಯಕ್ಷರುಗಳಾಗಿ ಶ್ರೀಮತಿ ಶಾರದಾ ಕೃಷ್ಣ ಈಶ ಪುತ್ತೂರು ಹಾಗೂ ಉದಯ ದಂಬೆ ವಿಟ್ಳ, ಪ್ರಧಾನ ಕಾರ್ಯದರ್ಶಿಯಾಗಿ ಮಹಾಲಿಂಗನ್ ಬಾಜರ್ತೊಟ್ಟಿ ಸುಳ್ಯ, ಕೋಶಾಧಿಕಾರಿಯಾಗಿ ಸುಬ್ಬಪ್ಪ ಪಟ್ಟೆ ಪುತ್ತೂರು, ಜೊತೆ ಕಾರ್ಯದರ್ಶಿಯಾಗಿ ಚಂದ್ರಶೇಖರ ಪನ್ನೆ ಸುಳ್ಯ ಹಾಗೂ ಸಂಘಟನಾ ಕಾರ್ಯದರ್ಶಿಗಳಾಗಿ ದಿನಕರ ಅಳಿಕೆ ವಿಟ್ಲ ಮತ್ತು ಕೇಶವ ಕೋರಿಗದ್ದೆ ಈಶ್ವರಮಂಗಲ ಆಯ್ಕೆಯಾದರು.

ಸಂಘದ ಗೌರವ ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಚಂದ್ರಶೇಖರ ಉದ್ದಂತಡ್ಕ ಸುಳ್ಯ, ನಿರ್ದೇಶಕರುಗಳಾಗಿ ಬಾಲಕೃಷ್ಣ ಯಸ್ ಮಂಗಳೂರು, ನಾರಾಯಣ ಮಂಜನಾಡಿ ಮಂಗಳೂರು, ಕೃಷ್ಣ ಡಿ ಯಸ್ ಮಂಗಳೂರು, ಉದಯ ಕುಮಾರ್ ಗೋರಿಗುಡ್ಡೆ ಮಂಗಳೂರು, ಪ್ರವೀಣ್ ಜಯನಗರ ಸುಳ್ಯ, ಸುರೇಶ್ ಕರ್ಲಪ್ಪಾಡಿ ಸುಳ್ಯ, ವಿಜಯ ಕುಮಾರ್ ಎರ್ಮೇಟ್ಟಿ ಸುಳ್ಯ, ನವೀನ್ ಪಾದೆಕಲ್ಲು ವಿಟ್ಲ, ಸುಬ್ಬ ಮೂಡಂಬೈಲು ವಿಟ್ಲ, ನಾಗೇಶ್ ಪೆರುವಾಯಿ ವಿಟ್ಲ, ದಾಮೋದರ ಪುತ್ತೂರು, ಪ್ರಸಾದ್ ಕಲ್ಲರ್ಪೆ ಪುತ್ತೂರು, ತಿಮ್ಮಪ್ಪ ಪಾಟಾಳಿ ಪುತ್ತೂರು, ಮಹಾಲಿಂಗ ಪಂಚೋಡಿ ಈಶ್ವರಮಂಗಲ, ಆನಂದ ಏರಾಜೆ ಈಶ್ವರಮಂಗಲ, ಪ್ರದೀಪ್ ಪಟ್ಟುಮೂಲೆ ಈಶ್ವರಮಂಗಲ, ರಾಜೇಶ್ ಡಿ ಈಶ್ವರಮಂಗಲ ಆಯ್ಕೆಯಾದರು. ಶಂಕರ ಪಾಟಾಳಿ ಪರಿವಾರಕಾನ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಪನ್ನೆ ವಂದಿಸಿದರು.