ಕನಕಮಜಲು: ರೈತರಿಗೆ ತರಬೇತಿ ಕಾರ್ಯಕ್ರಮ

0

ಅಡಿಕೆಯಲ್ಲಿ ಪರ್ಯಾಯ ಕೃಷಿ ಹಾಗೂ ಕಾಳುಮೆಣಸು ಬೇಸಾಯದ ಕುರಿತು ರೈತರಿಗೆ ತರಬೇತಿ

ಸುಳ್ಯದ ತೋಟಗಾರಿಕೆ ಇಲಾಖೆಯ ವತಿಯಿಂದ ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಜಾಲ್ಸೂರು, ಕನಕಮಜಲು ಯುವಕ ಮಂಡಲದ ಸಹಯೋಗದಲ್ಲಿ ಅಡಿಕೆಯಲ್ಲಿ ಪರ್ಯಾಯ ಕೃಷಿ ಹಾಗೂ ಕಾಳುಮೆಣಸು ಬೇಸಾಯದ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮವು ಕನಕಮಜಲು ಸಹಕಾರಿ ಸಂಘದ ಪ್ರಧಾನ ಕಛೇರಿಯ ಸಭಾಂಗಣದಲ್ಲಿ ಜ.4ರಂದು ಜರುಗಿತು.

ಕನಕಮಜಲು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶಾರದಾ ಉಗ್ಗಮೂಲೆ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಕನಕಮಜಲು ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ ಅವರು ಉದ್ಘಾಟಿಸಿದರು.

ಮಡಿಕೇರಿ ಅಪ್ಪಂಗಳದ ವಿಜ್ಞಾನಿಗಳಾದ ಡಾ. ಮುರಳೀಧರ ಹಾಗೂ ಹೊನ್ನಪ್ಪ ಅಸಂಗಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದು, ರೈತರಿಗೆ ತರಬೇತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಯುವಕ ಮಂಡಲದ ಅಧ್ಯಕ್ಷ ರಕ್ಷಿತ್ ಅಕ್ಕಿಮಲೆ, ಸಹಾಯಕ ತೋಟಗಾರಿಕಾ ನಿರ್ದೇಶಕಿ ಶ್ರೀಮತಿ ಸುಹಾನ ಪಿ‌.ಕೆ., ಪ್ರಗತಿಪರ ಕೃಷಿಕ ಶಿವಪ್ರಸಾದ್ ಬೊಳುಬೈಲು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಕರುಣಾಕರ ರೈ ಕುಕ್ಕಂದೂರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ ಸೇರಿದಂತೆ ಸಹಕಾರಿ ಸಂಘದ ನಿರ್ದೇಶಕರುಗಳು, ಸಿಬ್ಬಂದಿಗಳು, ಯುವಕ ಮಂಡಲದ ಸದಸ್ಯರುಗಳು ಸೇರಿದಂತೆ ಜಾಲ್ಸೂರು ಹಾಗೂ ಕನಕಮಜಲು ಗ್ರಾಮದ ಕೃಷಿಕರು ಉಪಸ್ಥಿತರಿದ್ದರು.