ಹಗಲಲ್ಲಿ ಸಮೀಪದ ಕಾಡಿನಲ್ಲಿ ಬಿಡಾರ ಹೂಡುವ ಕಾಡಾನೆಯಿಂದ ರಾತ್ರಿ ವೇಳೆ ಕೃಷಿಕರ ತೋಟಗಳಿಗೆ ನಿರಂತರ ದಾಳಿ
ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟಿರುವ ಒಂಟಿ ಸಲಗವೊಂದು ಅಲ್ಲಲ್ಲಿ ಕೃಷಿಕರ ತೋಟಗಳಿಗೆ ದಾಳಿ ನಡೆಸುತ್ತಿದ್ದು, ಜಾಲ್ಸೂರು ಗ್ರಾಮದ ನಂಗಾರಿನಲ್ಲಿ ಕೃಷಿ ನಾಶಗೊಳಿಸಿದ ಘಟನೆ ಜ.6ರಂದು ರಾತ್ರಿ ಸಂಭವಿಸಿದೆ.
ನಂಗಾರಿನ ಕೃಷಿಕ ರವಿಶಂಕರ್ ಭಟ್ ಅವರ ತೋಟದಲ್ಲಿ ಐದು ತೆಂಗಿನ ಮರ, ಅಡಿಕೆ, ಬಾಳೆ ಕೃಷಿ ನಾಶಗೊಳಿಸಿದೆ.
ಜ.5ರಂದು ರಾತ್ರಿ ಜಾಲ್ಸೂರಿನ ಕೆಮನಬಳ್ಳಿ ಪರಿಸರದಲ್ಲಿ ಕೃಷಿಕರ ತೋಟಕ್ಕೆ ದಾಳಿ ನಡೆಸಿದ ಈ ಒಂಟಿಸಲಗ ಹಗಲು ಹೊತ್ತಿನಲ್ಲಿ ಸಮೀಪದ ಕಾಡಿನಲ್ಲಿ ಬೀಡುಬಿಟ್ಟಿತ್ತು. ಇದೀಗ ಈ ಪರಿಸರದ ಅಲ್ಲಲ್ಲಿ ಕೃಷಿ ಹಾನಿಗೊಳಿಸುತ್ತಿದ್ದು, ಈ ಭಾಗದ ಕೃಷಿಕರ ನಿದ್ದೆಗೆಡಿಸಿದೆ.